fbpx

Please assign a menu to the primary menu location under menu

ನೋಡನೋಡುತ್ತಿದ್ದಂತೆ ಕುಸಿದುಬಿತ್ತು ಕ್ರೇನ್, ಅವಶೇಷಗಳಡಿ ಸಿಲುಕಿದ ಕಾರ್ಮಿಕರು! ಬೆಚ್ಚಿಬೀಳಿಸುವ ವೀಡಿಯೋ

ಆಂದ್ರಪ್ರದೇಶದ ವಿಶಾಖ ಪಟ್ಟಣಂನಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಕ್ರೇನ್ ಒಂದು ಏಕಾಏಕೀ ಕುಸಿದುಬಿದ್ದ ಪರಿಣಾಮ ಹತ್ತು ಮಂದಿ ಸಾವಿಗೀಡಾಗಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ಘಟಕದಲ್ಲಿ ಈ ಭಾರೀ ದುರಂತ ಸಂಭವಿಸಿದ್ದು, ಭಾರೀ ಸಾವುನೋವು ಸಂಭವಿಸಿದೆ. ಎಂದಿನಂತೆ ಶಿಪ್ ಯಾರ್ಡ್‌ನಲ್ಲಿ ಲೋಡ್ – ಅನ್ಲೋಡ್ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿ ಕ್ರೇನ್ ಏಕಾಏಕಿ ಕುಸಿದುಬಿದ್ದಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಇದರ ಅವಶೇಷಗಳ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ.

ಮೃತ ಕಾರ್ಮಿಕರ ಶವಗಳನ್ನು ಕ್ರೇನ್ ಅವಶೇಷಗಳಿಂದ ತೆಗೆಯುವ ಕಾರ್ಯ ಮುಂದುವರೆದಿದ್ದು, ಘಟನೆಯ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಸೂಕ್ತ ತನಿಖೆ ನಡೆಸುವುದಾಗಿ ಡಿಸಿಪಿ ಸುರೇಶ್ ಬಾಬು ತಿಳಿಸಿದ್ದಾರೆ. ಕ್ರೇನ್ ಅವಘಡದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!