fbpx

ಬೇಟೆಯಾಡಲು ಬಂದ ಹುಲಿಯಿಂದ ಚಾಣಾಕ್ಷತನದಿಂದ ಪಾರಾದ ಬಾತುಕೋಳಿ, ವೀಡಿಯೋ ಸಖತ್ ವೈರಲ್

ಬೇಟೆಯಾಡುವುದರಲ್ಲಿ ಹುಲಿಗಳು ಚಾಣಾಕ್ಷ ಪ್ರಾಣಿಗಳಾಗಿವೆ. ತಾನು ಬೇಟೆಯಾಡಲು ಇಚ್ಚಿಸುವ ಪ್ರಾಣಿಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಹುಲಿಗಳು ಬೇಟೆಗೆ ಸಜ್ಜಾಗುತ್ತವೆ. ತನಗಿಂತ ಭಾರೀ ಗಾತ್ರದ‌ ಪ್ರಾಣಿಗಳನ್ನೂ ಲೀಲಾಜಾಲವಾಗಿ ಬೇಟೆಯಾಡುವಷ್ಟು ತಾಕತ್ತು ಹುಲಿಗಳಿಗೆ ಇದೆ.

ಆದರೆ ಇಲ್ಲಿ ಹುಲಿಯೊಂದು ತನಗಿಂತ ಚಿಕ್ಕದಾದ ಬಾತುಕೋಳಿಯನ್ನು ಬೇಟೆಯಾಡಲು ಹೋಗಿ ಪೇಚಿಗೆ ಸಿಲುಕಿದೆ. ನೀರಿನಲ್ಲಿ ಈಜಾಡುತ್ತಿದ್ದ ಬಾತುಕೋಳಿಯನ್ನು ಬೇಟೆಯಾಡಿ ಹೊಟ್ಟೆ ತುಂಬಿಸುವ ಪ್ಲಾನ್ ಹಾಕಿದ ಹುಲಿ ನದಿಯಲ್ಲಿ ಈಜಿಕೊಂಡು ಬಾತುಕೋಳಿ ಇರೋ ಜಾಗಕ್ಕೆ ತೆರಳಿದೆ.


Continue Reading

ಇನ್ನೇನು ಬಾತುಕೋಳಿಯನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಬಾತುಕೋಳಿ ಕ್ಷಣಾರ್ಧದಲ್ಲಿ ನೀರಿನೊಳಗೆ ಹೊಕ್ಕು ಮಾಯವಾಗಿದೆ. ಏನು ಮಾಡಬೇಕು ಎಂದು ತೋಚದ ಹುಲಿ ಬಾತುಕೋಳಿಗಾಗಿ ಅತ್ತಿತ್ತ ಹುಡುಕಾಡಿದೆ. ಆದರೆ ಚಾಣಾಕ್ಷ ಬಾತುಕೋಳಿ ಹುಲಿಯ ಹಿಂಬದಿಯಿಂದ ಮೇಲಕ್ಕೆದ್ದು ಅಲ್ಲಿಂದ ತಪ್ಪಿಸಿಕೊಂಡಿದೆ.

ಇದನ್ನೂ ಓದಿ:  ಮಾಸ್ಕ್ ಬದಲಿಗೆ ಜೀವಂತ ಹೆಬ್ಬಾವನ್ನೇ ಮುಖಕ್ಕೆ ಸುತ್ತಿಕೊಂಡ ವ್ಯಕ್ತಿ! ವೈರಲ್ ವಿಡಿಯೋ ನೋಡಿ

ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಬಾತುಕೋಳಿಯ ಚಾಣಾಕ್ಷತೆಗೆ ನೆಟ್ಟಿಗರು ಶಬಾಶ್ ಎಂದಿದ್ದಾರೆ. ವೈರಲ್ ವೀಡಿಯೋ ನೋಡಿ,

Watch Video

Trending Short Videos


close

This will close in 26 seconds

error: Content is protected !!