fbpx

ವಿಮಾನಗಳ ಮುಖಾಮುಖಿ ಡಿಕ್ಕಿ, ಭೀಕರ ಅಪಘಾತಕ್ಕೆ 7ಬಲಿ (ವೀಡಿಯೋ)

ವಿಮಾನಗಳ ಮದ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಶಾಸಕ ಸೇರಿ ಏಳು ಮಂದಿ ಸಾವಿಗೀಡಾಗಿದ್ದಾರೆ. ಅಮೇರಿಕಾದ ಅಲಾಸ್ಕದಲ್ಲಿ ಈ ಅಪಘಾತ ನಡೆದಿದ್ದು, ಎರಡು ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿದೆ.

ಅಲಾಸ್ಕಾ ನಗರ ಕೆನೈ ಪೆನಿನ್ಸುಲಾದ ಸೋಲ್ಡೊಟ್ನ ನಗರದ ವಿಮಾನ ನಿಲ್ದಾಣ ಬಳಿ ಈ ಅಪಘಾತ ಸಂಭವಿಸಿದೆ. ಇದೇ ಏರಿಯಾವನ್ನು ಪ್ರತಿನಿಧಿಸುವ ಶಾಸಕ ಗ್ಯಾರಿ ನೂಪ್ ಅವರು ಏಕಾಂಗಿಯಾಗಿ ಒಂದು ವಿಮಾನದಲ್ಲಿ ಸಂಚರಿಸುತ್ತಿದ್ದರೆ, ಪ್ರವಾಸಿಗರನ್ನೊಳಗೊಂಡ ಮತ್ತೊಂದು ವಿಮಾನ ಸೌಥ್ ಕೆರೋಲಿನಾದಿಂದ ಅಲಾಸ್ಕ ಕಡೆಗೆ ಸಂಚರಿಸುತ್ತಿತ್ತು


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈ ವೇಳೆ ಮಾರ್ಗ ಮಧ್ಯೆ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಎರಡೂ ವಿಮಾನಗಳ ಪೈಲಟ್, ಪ್ರಯಾಣಿಕರು ಸೇರಿ ಏಳು ಮಂದಿಯೂ ಬಲಿಯಾಗಿದ್ದಾರೆ. ಮೃತ ಶಾಸಕ ಶಾಸಕ ಗ್ಯಾರಿ ನೂಪ್ ಓರ್ವ ರಿಪಬ್ಲಿಕನ್ ಮತ್ತು ರಾಜ್ಯ ಸದನದ ಉಭಯಪಕ್ಷೀಯ ಬಹುಮತದ ಸದಸ್ಯರಾಗಿದ್ದರು. ಅಪಘಾತಕ್ಕೀಡಾದ ವಿಮಾನದ ಅವಶೇಷಗಳ ದೃಷ್ಯಗಳು ಇದೀಗ ವೈರಲ್ ಆಗಿದೆ.

Watch Video

error: Content is protected !!