fbpx

ಆಟವಾಡುವ ಸಂದರ್ಭದಲ್ಲಿ ಪೈಪ್‌ನೊಳಗೆ ಸಿಕ್ಕಾಕೊಳ್ತು ಪುಟ್ಟ ಮಗುವಿನ ತಲೆ, ಮುಂದೆನಾಯ್ತು ನೋಡಿ (ವೀಡಿಯೋ)

ಪುಟ್ಟ ಮಕ್ಕಳನ್ನು ನೋಡಿಕೊಳ್ಳುವಾಗ ಎಷ್ಟೇ ಎಚ್ಚರಿಕೆ ವಹಿಸಿದ್ರೂ ಸಾಲದು. ಅದೆಷ್ಟೋ ಮಕ್ಕಳು ಆಟವಾಡುವಾಗ ಕೈಗೆ ಸಿಕ್ಕ ವಸ್ತುಗಳನ್ನು ನುಂಗಿ ಬಿಡುತ್ತಾರೆ, ಇದು ಪ್ರಾಣಕ್ಕೆ ಸಂಚಕಾರ ಉಂಟು ಮಾಡಿದ್ದೂ ಇದೆ.

ಇಂತಹದ್ದೆ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಮಗುವೊಂದು ಆಟವಾಡುವಾಗ ನೀರಿನ ಪೈಪ್ ಒಳಗೆ ತಲೆಯನ್ನು ಹೊಕ್ಕಿಸಿಕೊಂಡಿದೆ. ಮತ್ತೆ ತಲೆಯನ್ನು ಅದರಿಂದ ಹೊರತೆಗೆಯಲಾಗದೆ ಬಿಕ್ಕಿಬಿಕ್ಕಿ ಅಳಲು ಶುರುಮಾಡಿದೆ.

ಇದನ್ನು ಗಮನಿಸಿದ ತಾಯಿಯೂ ಮಗುವಿನ ತಲೆಯಿಂದ ಪೈಪ್ ತೆಗೆಯಲು ಯತ್ನಿಸಿ ವಿಫಲರಾಗಿದ್ದಾರೆ. ಕೊನೆಗೆ ವೈದ್ಯರ ಮೊರೆ ಹೋಗಿದ್ದಾರೆ. ಅಲ್ಲಿ ವೈದ್ಯರು ಬಹಳ ಪ್ರಯತ್ನದ ನಂತರ ಗರಗಸದ ಸಹಾಯದಿಂದ ಪೈಪ್ ಅನ್ನು ಜಾಗರೂಕತೆಯಿಂದ ಕತ್ತರಿಸಿ ಹೊರತೆಗೆದಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,

ಇದನ್ನೂ ಓದಿ:  ಲ್ಯಾಂಡ್ ಆಗುತ್ತಿದ್ದಂತೆ ಬೆಂಕಿ ಹತ್ತಿಕೊಂಡು ಸುಟ್ಟುಕರಕಲಾದ ವಿಮಾನ! 22 ಮಂದಿ ಸಜೀವ ದಹನ (ವಿಡಿಯೋ)

Watch Video

Trending Short Videos

error: Content is protected !!