ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಸ್ಸಾಂ, ಉತ್ತರಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾಕಿ ಸಂಭವಿಸಿದ್ದು, ಜನಜೀವನ ಅಸ್ಥವ್ಯಸ್ತವಾಗಿದೆ.
ಮಳೆಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಕಾಂಗ್ರೆಸ್ ಶಾಸಕ ತೊರೆದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ತೊರೆಯಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ. ಉತ್ತರಾಖಂಡದ ಕಾಂಗ್ರೆಸ್ ಶಾಸಕ ಹರೀಶ್ ಧಾಮಿಯವರು ತೊರೆಗೆ ಬಿದ್ದ ಶಾಸಕ.
ನೇಪಾಳ ಗಡಿಗೆ ಹೊಂದಿಕೊಂಡಿರುವ ಪಿತ್ತೋರ್ಗಢದ ಧಾರ್ಚುಲಾ ಎಂಬಲ್ಲಿ ಮಳೆಯಿಂದಾಗಿ ಭಾರಿ ಹಾನಿ ಸಂಭವಿಸಿದ್ದು, ಇದರ ವೀಕ್ಷಣೆಗೆ ಶಾಸಕರು ತಮ್ಮ ಬೆಂಬಲಿಗರ ಜೊತೆ ತೆರಳಿದ್ದರು. ತೊರೆದಾಟುವ ವೇಳೆ ಆಯಾತಪ್ಪಿ ನೀರಿಗೆ ಬಿದ್ದಿದ್ದು, ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ.
ತಕ್ಷಣ ಅವರ ಜೊತೆಗಿದ್ದವರು ಶಾಸಕರ ರಕ್ಷಣೆಗೆ ಧಾವಿಸಿದ್ದು, ಶಾಸಕರನ್ನು ನೀರಿನಿಂದ ಮೇಲೆತ್ತಲು ಹರಸಾಹಸ ಪಟ್ಟಿದ್ದು, ಶಾಸಕರ ಭಾರೀ ಗಾತ್ರದ ದೇಹವನ್ನು ಮೇಲಕ್ಕೆ ಎತ್ತುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಜಾರಿಬಿದ್ದ ಕಾರಣ ಶಾಸಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜೊತೆಗಿದ್ದವರ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈರಲ್ ವೀಡಿಯೋ ನೋಡಿ,
Watch Video
#WATCH Uttarakhand: Congress MLA Harish Dhami had a narrow escape after he slipped while crossing a flooded rivulet in Dharchula area of Pithoragarh. He was rescued by party workers & supporters accompanying him. (30.07.2020) pic.twitter.com/9pZDHSd30T
— ANI (@ANI) July 31, 2020