fbpx

Please assign a menu to the primary menu location under menu

ಪ್ಯಾಂಟ್‌ನೊಳಗೆ ನುಗ್ಗಿದ ಹಾವು, ಯುವಕ ಮಾಡಿದ್ದೇನು ನೋಡಿ (ವೈರಲ್ ವೀಡಿಯೋ)

ಪ್ಯಾಂಟ್‌ನೊಳಕ್ಕೆ ಹಾವೊಂದು ಹೊಕ್ಕ ಪರಿಣಾಮ ಯುವಕ ಕಂಗಾಲಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶ ಮಿರ್ಜಾಪುರದ ಸಿಖಂದರಪುರದಲ್ಲಿ ವಿದ್ಯುತ್ ಕಂಬ, ವೈರ್ ಅಳವಡಿಸುವ ಕಾಮಗಾರಿಗೆ ಆಗಮಿಸಿದ್ದ ಯುವಕನೇ ಪ್ಯಾಂಟ್ ಒಳಗೆ ಹಾವನ್ನು ಹೊಕ್ಕಿಸಿಕೊಂಡ ನತದೃಷ್ಟ.

ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಹಾವು ಏಕಾಏಕಿ ಯುವಕನ ಪ್ಯಾಂಟ್ ಒಳಕ್ಕೆ ನುಗ್ಗಿದ್ದು, ತಕ್ಷಣ ನಿದ್ದೆಯಿಂದ ಎಚ್ಚರಗೊಂಡ ಯುವಕನಿಗೆ ಇದರ ಅರಿವಾಗಿದೆ. ಏನು ಮಾಡಬೇಕು ಎಂದು ತೋಚದೆ ಯುವಕ ಸ್ವಲ್ಪ ಹೊತ್ತು ಸುಮ್ಮನೆ ಹಾಗೇ ಕೂತಿದ್ದಾನೆ. ಸ್ವಲ್ಪ ಅಲುಗಾಡಿದರೂ ಹಾವು ಕಚ್ಚಿ ಯುವಕನ ಪ್ರಾಣಕ್ಕೆ ಕುತ್ತುಬರುವ ಅಪಾಯವಿತ್ತು.

ಈ ಕಾರಣಕ್ಕೆ ಅಲ್ಲೆ ಇದ್ದ ಕಂಬವೊಂದನ್ನು ಹಿಡಿದುಕೊಂಡು ಯುವಕ ಸತತ ಏಳುಗಂಟೆ ನಿಂತುಕೊಂಡು, ಬೆಳಗ್ಗೆ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಆತನ ಗೆಳೆಯರು ಮುಂಜಾಗೃತಾ ಕ್ರಮವಾಗಿ ಅಂಬ್ಯುಲೆನ್ಸ್‌ಗೆ ಕರೆಮಾಡಿ, ಯುವಕನ ಪ್ಯಾಂಟ್ ಒಳಗ್ಗೆ ನುಸುಳಿದ್ದ ಹಾವನ್ನು ಹೊರತೆಗೆದಿದ್ದಾರೆ.

ಯುವಕನ ಅದೃಷ್ಟಕ್ಕೆ ಹಾವು ಯುವಕನಿಗೆ ಕಚ್ಚಿಲ್ಲ, ಒಂದು ವೇಳೆ ಹಾಗೇನಾದರು ಆಗಿದ್ದರೂ ತುರ್ತು ಚಿಕಿತ್ಸೆಗೇ ಅಂಬ್ಯುಲೆನ್ಸ್ ಸ್ಥಳದಲ್ಲೇ ಇತ್ತು. ಇದೀಗ ಯುವಕನ ಪ್ಯಾಂಟ್‌ನಿಂದ ಹಾವು ತೇಗೆಯುವ ವೀಡಿಯೋ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!