fbpx

Please assign a menu to the primary menu location under menu

ಚಾಲಕನ ಆತುರಕ್ಕೆ ನೀರಿನಲ್ಲಿ ಕೊಚ್ಚಿ ಹೋಯಿತು ಕಾರು, ಶಾಕಿಂಗ್ ವೀಡಿಯೋ ನೋಡಿ

ಕೆಲವೊಮ್ಮೆ ನಾವು ತೆಗೆದುಕೊಳ್ಳೋ ಆತುರದ ನಿರ್ಧಾರಗಳು ಯಾವರೀತಿ ನಮ್ಮ ಜೀವಕ್ಕೆ ಸಂಚಕಾರ ತಂದೊಡ್ಡುತ್ತೆ ಅನ್ನೋದಕ್ಕೆ ಈ ದೃಶ್ಯವೇ ಸಾಕ್ಷಿ. ಕಾರು ಚಾಲಕ ತೆಗೆದುಕೊಂಡ ಆತುರದ ನಿರ್ಧಾರ ಯಾವರೀತಿ ಆತನ ಪ್ರಾಣಕ್ಕೆ ಕುತ್ತುತಂದಿದೆ ನೋಡಿ.

ಘಟನೆ ನಡೆದಿರೋದು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ. ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿಯ ಸೇತುವೆಯನ್ನು ದಾಟಲು ಹೋದ ಕಾರು ಚಾಲಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಬಸ್‌ನ ಹಿಂಬಾಗದಲ್ಲಿ ಕಾರು ಕೂಡ ಸೇತುವೆ ದಾಟಲು ಯತ್ನಿಸಿದ್ದು ಬಸ್ ಹೇಗೂ ಸೇತುವೆಯನ್ನು ದಾಟಿದೆ.

ಆದರೆ ನೀರಿನ ರಭಸಕ್ಕೆ ಕಾರು ಚಾಲಕ ಕಾರಿನ ಮೇಲಿನ ಹಿಡಿತ ಕಳೆದುಕೊಂಡು ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಸುಮಾರು ದೂರ ಕಾರು ನೀರಿನಲ್ಲಿ ಕೊಚ್ಚಿಹೋಗಿದ್ದು, ತಕ್ಷಣ ಸ್ಥಳೀಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹರಿಯುವ ನದಿಯಲ್ಲಿ ಈಜಿ ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಕಾರು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,

Watch Video

error: Content is protected !!