fbpx

ದಂಡದಿಂದ ಪಾರಾಗಲು ಪತ್ನಿಯ ಒಳಲಂಗ ತೆಗೆದು ಮುಖಮೂತಿ ಮುಚ್ಚಿಕೊಂಡ ಭೂಪ, ವೈರಲ್ ವೀಡಿಯೋ ನೋಡಿ

ಕರೋನಾ ಸೋಂಕು ಭಾರತದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಮೊದಲ ಎರಡು ತಿಂಗಳುಗಳ ಕಾಲ ಕರೋನಾ ನಿಯಂತ್ರಣಕ್ಕೆ ಬಂದಂತೆ ಕಂಡರು ಕಳೆದ ಒಂದುವರೆ ತಿಂಗಳಿನಲ್ಲಿ ಕರೊನಾ ಮಹಾಮಾರಿ ದೇಶಾದ್ಯಂತ ಲಕ್ಷಾಂತರ ಮಂದಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

ದೇಶದ ಹಲವು ಭಾಗಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಲಾಗಿದೆ. ಆದರೂ ಕೆಲವರು ಇನ್ನೂ ಮಾಸ್ಕ್ ಧರಿಸದೆ ಅಡ್ಡಾಡುತ್ತಿದ್ದು, ಪೋಲೀಸರ ಕೈಗೆ ಸಿಕ್ಕಿಬಿದ್ದರೆ ಲಾಠಿ ಏಟು ತಿನ್ನುತ್ತಿದ್ದಾರೆ‌. ಮಧ್ಯಪ್ರದೇಶದ ದಾಮಹ್‌ನಲ್ಲಿ ಇಂತಹದ್ದೇ ಘಟನೆ ನಡೆದಿದೆ.


Continue Reading

ಮಾಸ್ಕ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಪೋಲೀಸರು ತಪಾಸಣೆ ಮಾಡುತ್ತಿರೋದನ್ನ ಗಮನಿಸುತ್ತಿದ್ದಂತೆ ತನ್ನ ಪತ್ನಿಯ ಪೆಟಿಕೋಟ್(ಸೀರೆ ಒಳಗೆ ಧರಿಸೋ ಲಂಗ) ತೆಗೆದು ಮಾಸ್ಕ್‌ನಂತೆ ಧರಿಸಿದ್ದಾನೆ‌. ಇದನ್ನು ಗಮನಿಸಿದ ಪೋಲೀಸರೇ ಬೇಸ್ತುಬಿದ್ದಿದ್ದಾರೆ.

ಇದನ್ನೂ ಓದಿ:  ಸಿಂಹಗಳ ಗುಂಪಿನ ಜೊತೆ ಕಾದಾಡಿ ತನ್ನ ಕರುವನ್ನು ರಕ್ಷಿಸಿದ ಕಾಡೆಮ್ಮೆ! ವೈರಲ್ ವಿಡಿಯೋ ನೋಡಿ

ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋದರಿಂದ ಮಧ್ಯಪ್ರದೇಶದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ, ಮಾಸ್ಕ್ ಧರಿಸದೆ ಓಡಾಡೋರ‌ನ್ನ ಹಿಡಿದು ದಂಡ ವಿಧಿಸಲಾಗುತ್ತಿದೆ. ಇದೇ ಕಾರಣಕ್ಕೆ ದಾಮೋಹ್‌ನ ಬಂಡಕ್‌ಪುರದಲ್ಲಿ ಪೋಲೀಸರ ತಪಾಸಣೆ ಸಂದರ್ಭದಲ್ಲಿ ವ್ಯಕ್ತಿ ಮಾಸ್ಕ್ ಬದಲು ತನ್ನ ಪತ್ನಿಯ ಪೆಟಿಕೋಟ್ ಧರಿಸಿದ್ದ.

ಪೋಲೀಸರು ತಪಾಸಣೆ ಮಾಡುತ್ತಿರೋದನ್ನ ಗಮನಿಸಿದ ವ್ಯಕ್ತಿ ದಂಡ ಕಟ್ಟಿಸಿಕೊಳ್ಳೋದರಿಂದ ಪಾರಾಗಲು ಬ್ಯಾಗ್‌ನಲ್ಲಿದ್ದ ತನ್ನ ಪತ್ನಿಯ ಪೆಟಿಕೋಟ್‌ನಿಂದ ಮುಖ-ಮೂತಿ ಮುಚ್ಚಿಕೊಂಡಿದ್ದಾನೆ. ಕೊನೆಗೂ ವ್ಯಕ್ತಿ ದಂಡಕಟ್ಟಿಸಿಕೊಳ್ಳೋದರಿಂದ ಪಾರಾಗಿದ್ದು, ಆತನ ಪೋಟೋ, ವೀಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ವೀಡಿಯೋ ನೋಡಿ,

Watch Video

Trending Short Videos

close

This will close in 26 seconds

error: Content is protected !!