ಸರ್ಕಸ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಳೆಯರಿಂದ ವೃದ್ಧರವರೆಗೆ ಸರ್ಕಸ್ ನೋಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಈ ಸರ್ಕಸ್ನಲ್ಲಿರುವ ಪ್ರಾಣಿಗಳಿಂದ ಹಲವು ಬಾರಿ ಪ್ರಾಣಾಪಾಯ ಸಂಭವಿಸಿದ್ದೂ ಇದೆ. ಚೀನಾದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ
ಸರ್ಕಸ್ನ ಹುಲಿಯೊಂದು ಬೋನಿನಿಂದ ತಪ್ಪಿಸಿಕೊಂಡು ಪ್ರೇಕ್ಷಕರ ಮೇಲೆ ದಾಳಿ ಮಾಡಿದೆ. ಈ ಘಟನೆಯ ಬೆಚ್ಚಿ ಬೀಳಿಸುವ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಬೋನಿನಿಂದ ತಪ್ಪಿಸಿಕೊಂಡ ಹುಲಿ ನೇರವಾಗಿ ಪ್ರೇಕ್ಷಕರ ಮೇಲೆರಗಿ ದಾಳಿ ಮಾಡಿದ್ದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಈ ಘಟನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಹುಲಿ ಬೋನಿನಿಂದ ಹೊರಬಂದಿದ್ದೇ ಜನರು ಬೇರೆಬೇರೆ ದಿಕ್ಕಿಗೆ ಓಡಿಹೋಗುತ್ತಿರೋದನ್ನ ನಾವು ವೀಡಿಯೋದಲ್ಲಿ ಕಾಣಬಹುದು.
ಉತ್ತರ ಚೀನಾದ ಷಾನ್ಕ್ಷಿ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಜಾತ್ರಾ ಕಾರ್ಯಕ್ರಮವೊಂದಕ್ಕೆ ಸರ್ಕಸ್ ಬಂದಿತ್ತು. ವೈರಲ್ ವೀಡಿಯೋ ನೋಡಿ,