fbpx

Please assign a menu to the primary menu location under menu

ಚಿನ್ನದ ಹಲ್ಲನ್ನು ಹೊಂದಿರುವ ವಿಶ್ವದ ಏಕೈಕ ಹುಲಿ, ವೀಡಿಯೋ ನೋಡಿ

ಜರ್ಮನಿಯಲ್ಲಿರುವ ಈ ಆರು ವರ್ಷದ ಬೆಂಗಾಲಿ ಹುಲಿ ಭಾರೀ ಆಕರ್ಷಣೆಗೆ ಕಾರಣವಾಗಿದೆ. ಈ ಹುಲಿ ಚಿನ್ನದ ಹಲ್ಲನ್ನು ಹೊಂದಿರುವ ವಿಶ್ವದ ಏಕೈಕ ಹುಲಿಯಾಗಿದೆ.

ಹಲ್ಲಿನ ತೊಂದರೆಯಿಂದ ಬಳಲುತ್ತಿದ್ದ ಈ ಹುಲಿ ಮಾಂಸ ತಿನ್ನಲು ಕಷ್ಟ ಪಡುತ್ತಿತ್ತು. ಹುಲಿಗೆ ಚಿಕಿತ್ಸೆ ನೀಡಲು ಬಂದ ದಂತವೈದ್ಯರು ಅದರ ಮುಂಭಾಗದ ಕೋರೆ ಹಲ್ಲಿನಲ್ಲಿ ಎರಡು ಬಿರುಕು ಬಿದ್ದಿರೋದನ್ನ ಗಮನಿಸಿದ್ದಾರೆ. ಅದನ್ನು ಹಾಗೆ ಬಿಟ್ಟರೆ ಹುಲಿ ತನ್ನ ಒಂದು ಕೋರೆಹಲ್ಲನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿತ್ತು

ಇದನ್ನು ತಡೆಯಲು ವೈದ್ಯರ ತಂಡ ಹುಲಿಯ ಕೋರೆ ಹಲ್ಲಿಗೆ ಚಿನ್ನದ ಕವಚ ಅಳವಡಿಸಲು ಶಿಫಾರಸು ಮಾಡಿದ್ದಾರೆ. ಕೊನೆಗೂ ಹುಲಿಗೆ ದಂತ ವೈದ್ಯರ ತಂಡ ಚಿನ್ನದ ಹಲ್ಲನ್ನು ಅಳವಡಿಸಿದ್ದು, ಇದೀಗ ಹುಲಿ ಯಾವುದೇ ತೊಂದರೆಯಿಲ್ಲದೆ ಆಹಾರ ಸೇವಿಸುತ್ತಿದೆ. ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!