ಮೊಸಳೆಗಳ ಹೆಸರು ಕೇಳಿದರೆ ಸಾಕು ನಮಗೆ ಎದೆ ಜೋರಾಗಿ ಬಡಿದುಕೊಳ್ಳಲು ಶುರುವಾಗುತ್ತೆ, ಇನ್ನು ಅದರ ಹತ್ತಿರ ಹೋಗೋದು ಅಂದರೆ ದೂರದ ಮಾತೇ ಸರಿ. ಒಮ್ಮೆ ಅದರ ಬಾಯಿಗೆ ಸಿಕ್ಕಿಹಾಕಿಕೊಂಡರೆ ಅದರ ಹಿಡಿತದಿಂದ ಹೊರಬರೋದು ಅಸಾಧ್ಯವಾದ ಮಾತೇ ಸರಿ.
ಆದರೆ ಚಿರತೆಯೊಂದು ದೈತ್ಯ ಮೊಸಳೆಯ ಭೇಟೆಯನ್ನೇ ಕದ್ದು ತಿನ್ನುವ ವೀಡಿಯೋವೊಂದು ವೈರಲ್ ಆಗಿದೆ. ಮೊಸಳೆ ಭೇಟೆಯಾಡಿದ ಪ್ರಾಣಿಯನ್ನು ತನ್ನ ಬಾಯಲ್ಲಿ ಹಿಡಿದು ತಿನ್ನುತ್ತಿರುತ್ತೆ. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಚಿರತೆ, ಮೊಸಳೆಯ ಬಾಯಿಯಿಂದ ಮಾಂಸದ ತುಂಡನ್ನು ಕಿತ್ತು ತಿಂದಿದೆ.
ದೈತ್ಯ ಮೊಸಳೆಯ ಬಾಯಿಯಿಂದ ಮಾಂಸ ಕದ್ದು ತಿಂದಿರುವ ಚಿರತೆಯ ಧೈರ್ಯಕ್ಕೆ ನೆಟ್ಟುಗರು ಫಿದಾ ಆಗಿದ್ದಾರೆ. ಇನ್ನು ಕೆಲವರು ಮೊಸಳೆ ಹೊಟ್ಟೆ ತುಂಬಿರಬೇಕು, ಹಾಗಾಗಿ ಚಿರತೆಯ ಮೇಲೆ ದಾಳಿ ಮಾಡಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ವೈರಲ್ ವೀಡಿಯೋ ನೋಡಿ,
Watch Video
Opportunity knocks only once and if you are not ready to seize it, be sure that someone else will.
A leopard steals food straight from a croc’s mouth. VC: Nicole D pic.twitter.com/zhija3jrs0— Naveed Trumboo IRS (@NaveedIRS) July 27, 2020