fbpx

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿದ ಆನೆ, ವೈರಲ್ ವೀಡಿಯೋ ನೋಡಿ

ಪ್ರಾಣಿಗಳು ಸ್ನೇಹಜೀವಿಗಳು, ತಮ್ಮ ಮೇಲೆ ಪ್ರೀತಿ ತೋರಿದವರನ್ನು ಯಾವತ್ತಿಗೂ ಮರೆಯೋಲ್ಲ. ಪ್ರಾಣಿಗಳಲ್ಲೇ ನಾಯಿಯನ್ನು ನಿಯತ್ತಿನ ಪ್ರಾಣಿಯೆಂದು ಕರೆಯಲಾಗುತ್ತೆ, ಆದರೆ ಆನೆಯೊಂದು ತಾನೇನು ನಿಯತ್ತಿನಲ್ಲಿ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದೆ.

ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ಆನೆಯೊಂದು ರಕ್ಷಿಸಿರುವ ವೀಡಿಯೋ ವೈರಲ್ ಆಗುತ್ತಿದೆ. ನದಿಯಲ್ಲಿ ಈಜುತ್ತಿದ್ದ ವ್ಯಕ್ತಿ ನೀರಿನ ಅಲೆಯ ಜೊತೆ ಕೊಚ್ಚಿ ಹೋಗಿದ್ದು ತಕ್ಷಣ ದೂರದ ಆನೆಯ ಹಿಂಡಿನಲ್ಲಿದ್ದ ಮರಿ ಆನೆಯೊಂದು ನೀರಿಗಿಳಿದು ತನ್ನ ಪ್ರಾಣವನ್ನೂ ಲೆಕ್ಕಿಸದೆ ಆ ವ್ಯಕ್ತಿಯನ್ನು ಕಾಪಾಡಿದೆ.

ಅಸಲಿಗೆ ಅಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ಬೇರಾರು ಅಲ್ಲ, ಆ ಆನೆಯನ್ನು ಸಾಕುವ ಮಾವುತ. ಆತ ನೀರಿನಲ್ಲಿ ಕೊಚ್ಚಿ ಹೋಗುವಂತೆ ನಟಿಸಿದ್ದು, ಇದನ್ನು ನಿಜವೆಂದು ಭಾವಿಸಿದ ಆನೆ ತಕ್ಷಣ ನೀರಿಗಿಳಿದು ತನ್ನನ್ನು ಸಾಕುವ ಮಾವುತನನ್ನು ತನ್ನ ಸೊಂಡಿಲಿನ ಸಹಾಯದಿಂದ ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದೆ. ಆನೆಯ ನಿಯತ್ತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೋ ನೋಡಿ,

Watch Video

error: Content is protected !!