fbpx

ಭಾರತಕ್ಕೆ ಬಂದಿಳಿದ ರಫೇಲ್ ಯುದ್ಧವಿಮಾನ, ಅದ್ದೂರಿ ಸ್ವಾಗತ ಹೇಗಿತ್ತು ನೋಡಿ (ವೀಡಿಯೋ)

ಬಹು ನಿರೀಕ್ಷಿತ ರಫೇಲ್ ಯುದ್ಧವಿಮಾನಗಳ ಮೊದಲ ಐದು ತಂಡ ಭಾರತಕ್ಕೆ ಬಂದಿಳಿದಿದೆ. ಐದು ಯುದ್ಧ ವಿಮಾನಗಳು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಯಶಸ್ವಿಯಾಗಿ ಬಂದಿಳಿದಿದೆ. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹಾಗೂ ವಾಯು ಸೇನೆ ಬಹಳ ಸಂಭ್ರಮದಿಂದ ರಫೇಲ್ ವಿಮಾನಗಳನ್ನು ಬರಮಾಡಿಕೊಂಡಿದ್ದಾರೆ.

ಭಾರತದ ವಾಯುಪ್ರದೇಶ ಪ್ರವೇಶಿಸಿದ ಐದು ರಫೇಲ್ ಯುದ್ಧ ವಿಮಾನಗಳಿಗೆ ವಾಯುಸೇನೆಯ ಎರಡು ಸುಖೋಯ್ ಯುದ್ಧ ವಿಮಾನಗಳು ಬೆಂಗಾವಲು ನೀಡುವ ಮೂಲಕ ಭಾರತಕ್ಕೆ ಬರಮಾಡಿಕೊಂಡಿದೆ‌. ಸೋಮವಾರದಂದು ಫ್ರಾನ್ಸ್‌ನ ಮೇರಿಗ್ನಾಕ್ ವಾಯುನೆಲೆಯಿಂದ ಟೇಕ್‌ಆಫ್ ಆದ ಐದು ವಿಮಾನಗಳು ಇಂದು ಮಧ್ಯಾಹ್ನ 3 ಗಂಟೆಗೆ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಬಂದಿಳಿದಿದೆ.


Continue Reading

ವಾಯುಸೇನೆಯ ಎರಡು ದಶಕಗಳ ಕನಸು ಕೊನೆಗೂ ನನಸಾಗಿದ್ದು, ಒಟ್ಟು 36 ರಫೇಲ್ ವಿಮಾನಗಳ ಪೈಕಿ ಹತ್ತು ವಿಮಾನಗಳನ್ನು ಡಸಾಲ್ಟ್ ಕಂಪನಿ ಭಾರತೀಯ ವಾಯುಸೇನೆಗೆ ಹಸ್ತಾಂತರಿಸಿದೆ‌. ಇದರಲ್ಲಿ ಐದು ವಿಮಾನಗಳನ್ನು ಫ್ರಾನ್ಸ್‌ನಲ್ಲಿಯೇ ತರಬೇತಿಗಾಗಿ ಇರಿಸಲಾಗಿದೆ. ಇನ್ನುಳಿದ ವಿಮಾನಗಳನ್ನು 2021ರ ಒಳಗೆ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ರಫೇಲ್ ಯುದ್ಧ ವಿಮಾನದ ತಯಾರಕ ಡಸಾಲ್ಟ್ ಕಂಪನಿ ತಿಳಿಸಿದೆ.

ಇದನ್ನೂ ಓದಿ:  ಏರ್ಪೋರ್ಟ್ ‌ಲಗೇಜ್ ಕನ್ವೇಯರ್‌ನಲ್ಲಿ ಜಾಲಿ ರೈಡ್ ಹೊರಟ ಮಗು, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

Watch Video

Trending Short Videos

close

This will close in 26 seconds

error: Content is protected !!