fbpx

ಏಕಾಏಕಿ ಸೂಪರ್ ಮ್ಯಾನ್ ತರ ಹಾರಿ ಬಂದು ಮಹಿಳೆಯ ಮೇಲೆ ಬಿದ್ದ ಆಟೋ ಚಾಲಕ, ವೈರಲ್ ವೀಡಿಯೋ ನೋಡಿ

ರಸ್ತೆ ಮೇಲೆ ಜೋತು ಬಿದ್ದಿದ್ದ ಕೇಬಲ್ ತನ್ನ ಆಟೋಗೇ ಸಿಕ್ಕಿಹಾಕಿಕೊಂಡಿದ್ದಕ್ಕೆ ಬಿಡಿಸಲು ಹೋದ ಆಟೋ ಚಾಲಕ ಹಾರಿ ಮಹಿಳೆ ಮೇಲೆ ಬಿದ್ದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕೊಂಡರಾಜನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಜೋತು ಬಿದ್ದಿದ್ದ ಕೇಬಲ್ ವೈರ್ ರಿಕ್ಷಾಗೆ ತಗುಲಿದ್ದು ಅದನ್ನು ಬಿಡಿಸಲು ಆಟೋ ಚಾಲಕ ಪ್ರಯತ್ನಿಸಿದ್ದಾನೆ.

ಆದರೆ ಅದೇ ರಸ್ತೆಯಲ್ಲಿ ಬಂದ ಇನ್ನೊಂದು ವಾಹನಕ್ಕೆ ಅದೇ ಕೇಬಲ್ ಸಿಕ್ಕಿಹಾಕಿಕೊಂಡಿದ್ದು, ಗಮನಿಸದ ಚಾಲಕ ಮುಂದೆ ಸಾಗಿದ್ದಾನೆ‌. ಇತ್ತ ರಿಕ್ಷಾ ಚಾಲಕ ಕೇಬಲ್ ಹಿಡಿದುಕೊಂಡು ಬಿಡಿಸಲು ಯತ್ನಿಸುತ್ತಿದ್ದಂತೆ ಕೇಬಲ್ ಒಮ್ಮೆಲೆ ಮೇಲಕ್ಕೆ ಎದ್ದಿದೆ. ಇದರಿಂದಾಗಿ ರಿಕ್ಷಾ ಚಾಲಕ ಮೇಲಕ್ಕೆ ಎಸೆಯಲ್ಪಟ್ಟಿದ್ದಾನೆ.

ರಿಕ್ಷಾ ಚಾಲಕ ಹಾರಿ ಹೋಗಿ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಬಿದ್ದಿದ್ದಾನೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ರಿಕ್ಷಾ ಚಾಲಕ ಹಾಗೂ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

Watch Video

error: Content is protected !!