ಕಪಾಲಿ ಚಿತ್ರಮಂದಿರದ ಹಿಂಬಾಗದ ನಾಲ್ಕು ಅಂತಸ್ಥಿನ ಕಟ್ಟಡ ಮಂಗಳವಾರ ರಾತ್ರಿ ಏಕಾಏಕಿ ಕುಸಿದುಬಿದ್ದಿದೆ. ಮೆಜೆಸ್ಟಿಕ್ ಕಪಾಲಿ ಚಿತ್ರಮಂದಿರದ ಹಿಂಬಾಗದಲ್ಲಿದ್ದ ಹಳೆಯ ಕಟ್ಟಡವನ್ನು ಹೊಡೆದುಹಾಕಿ ನಾಲ್ಕು ಅಂತಸ್ಥಿನ ಹೊಸ ಕಟ್ಟಡ ಕಟ್ಟುವ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ನಾಲ್ಕು ಅಂತಸ್ಥಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ.
ಈ ಕಟ್ಟಡವನ್ನು ಹೋಟೇಲ್ ಹಾಗೂ ಲಾಡ್ಜಿಂಗ್ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಈ ಹಳೆಯ ಕಟ್ಟಡವನ್ನು ಹೊಡೆದುಹಾಕಿ ಹೊಸ ಕಟ್ಟಡ ನಿರ್ಮಾಣ ಮಾಡುವ ತೀರ್ಮಾನಕ್ಕೆ ಮಾಲೀಕರು ಬಂದಿದ್ದರು, ಆದರೆ ಇದೀಗ ಕಟ್ಟಡ ಅದಾಗದೆ ಕುಸಿದುಬಿದ್ದಿದೆ.
ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ವಾಹನ ನಿಲುಗಡೆ ಉದ್ದೇಶಕ್ಕೆ 50ಅಡಿ ಆಳಕ್ಕೆ ಭೂಮಿ ಅಗೆಯಲಾಗಿತ್ತು. ಈ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರೋ ಪರಿಣಾಮ ಸುತ್ತಮುತ್ತಲಿನ ಕಟ್ಟಡಗಳಲ್ಲಿ ಬಿರುಕು ಬಿದ್ದಿದೆ. ಈ ಕಾರಣಕ್ಕೆ ಈ ಕಟ್ಟಡಗಳಲ್ಲಿದ್ದ ಜನರನ್ನು ಸೋಮವಾರ ರಾತ್ರಿಯೇ ತೆರವುಗೊಳಿಸಲಾಗಿತ್ತು.
ಇದಾದ ಒಂದೇ ದಿನಕ್ಕೆ ಕಟ್ಟಡ ಉರುಳಿಬಿದ್ದಿದ್ದು, ಕಟ್ಟಡದಲ್ಲಿ ಯಾರೂ ಇಲ್ಲದಿದ್ದ ಕಾರಣಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಬಗ್ಗೆ ಉಪ್ಪಾರಪೇಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಟ್ಟಡ ಉರುಳಿಬಿದ್ದ ವೀಡಿಯೋ ನೋಡಿ,