fbpx

Please assign a menu to the primary menu location under menu

30,000 ಅಡಿ ಎತ್ತರದಲ್ಲಿ ರಾಫೆಲ್ ಜೆಟ್‌ಗೆ ಇಂಧನ ತುಂಬಿದ ಮನಮೋಹಕ ದೃಶ್ಯ ವೈರಲ್, ಇಲ್ಲಿದೆ ನೋಡಿ

ಭಾರತದ ವಾಯುಪಡೆಗೆ ಶಕ್ತಿ ತುಂಬಲು ರಫೇಲ್ ಯುದ್ಧವಿಮಾನದ ಮೊದಲ ಐದು ವಿಮಾನಗಳ ತಂಡ ಸೋಮವಾರ ಫ್ರಾನ್ಸ್‌ನಿಂದ ಹೊರಟಿದ್ದು, ಬುಧವಾರ ಭಾರತಕ್ಕೆ ತಲುಪಲಿದೆ. ಅಂಬಾಲ ವಾಯುನೆಲೆಯಲ್ಲಿ ಈ ಐದು ವಿಮಾನಗಳು ಬಂದಿಳಿಯಲಿದ್ದು, ಇದು 3 ಸಿಂಗಲ್ ಸೀಟರ್ ಮತ್ತು 2 ಡಬಲ್ ಸೀಟರ್ ವಿಮಾನಗಳನ್ನು ಒಳಗೊಂಡಿದೆ.

36 ರಫೇಲ್ ಯುದ್ಧ ವಿಮಾನಗಳನ್ನು ಭಾರತ ಫ್ರಾನ್ಸ್‌ನಿಂದ ಖರೀದಿಸಲು ಒಪ್ಪಂದ ‌ಮಾಡಿಕೊಂಡಿದ್ದು, ಈ ಒಪ್ಪಂದ ಏರ್ಪಟ್ಟು ನಾಲ್ಕು ವರ್ಷಗಳ ಬಳಿಕ ಮೊದಲ ಐದು ವಿಮಾನಗಳು ಭಾರತಕ್ಕೆ ಬರುತ್ತಿದೆ. ರಫೇಲ್ ಯುದ್ಧ ವಿಮಾನಗಳನ್ನು ಚಾಲನೆ ಮಾಡಲು ಭಾರತೀಯ ಪೈಲಟ್‌ಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಇನ್ನೂ ಹಲವರು ತರಬೇತಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಐದು ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಫ್ರಾನ್ಸ್‌ನ ಅಲ್ ಧಾಪ್ರಾದಿಂದ ಭಾರತದ ಅಂಬಾಲ ವಾಯುನೆಲೆಗೆ ಈ ಐದು ವಿಮಾನಗಳು ಬಂದಿಳಿಯಲಿದ್ದು, ಈ 7ಸಾವಿರ ಕಿಲೋಮೀಟರ್‌ಗಳ ಪ್ರಯಾಣದಲ್ಲಿ ವಿಮಾನಗಳಿಗೆ ಆಗಸದಲ್ಲೇ ಇಂಧನ ತುಂಬಿಸಲಾಗಿದೆ. ಸದ್ಯ ಇದರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಫೆಲ್ ಜೆಟ್‌ಗೆ ಹಾರಾಟದಲ್ಲಿರುವಾಗಲೇ ಯಾವರೀತಿ ಇಂಧನ ತುಂಬಿಸಲಾಗುತ್ತೆ ತಿಳಿಯಲು ಈ ವೀಡಿಯೋ ನೋಡಿ,

Watch Video

error: Content is protected !!