ಹುಲಿ, ಸಿಂಹಗಳು ನಾಯಿಗಳ ಮೇಲೆ ದಾಳಿ ಮಾಡೋದನ್ನ ನಾವು ಸಾಕಷ್ಟು ಸಲ ನೋಡಿರುತ್ತೇವೆ. ಆದರೆ ಶ್ವಾನವೊಂದು ಸಿಂಹಗಳ ಮೇಲೆಯೇ ದಾಳಿ ಮಾಡಿ ಕಾದಾಟಕ್ಕಿಳಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ತಮ್ಮ ಪಾಡಿಗೆ ವಿಶ್ರಾಂತಿ ಪಡೆಯುತ್ತಿದ್ದ ಸಿಂಹಗಳ ಮೇಲೆ ಎಲ್ಲಿಂದಲೋ ಕುಂಟುತ್ತಾ ಬಂದ ನಾಯಿ ದಾಳಿ ಮಾಡಿದ್ದು, ಸಿಂಹಗಳನ್ನು ಅಟ್ಟಾಡಿಸಿದೆ. ಸಿಂಹಗಳು ಎಷ್ಟೇ ಘರ್ಜಿಸಿದ್ರು, ಹೆದರಿಸಿದ್ರೂ ನಾಯಿ ಸ್ವಲ್ಪವೂ ಹೆದರದೆ ಸಿಂಹಗಳ ಜೊತೆ ಕಾದಾಡಿ ಸತಾಯಿಸಿದೆ.
ಸಿಂಹಗಳ ಜೋಡಿಗೆ ನಾಯಿ ಮೇಲಿನ ಕರುಣೆಯಿಂದಲೋ ಅಥವಾ ಹಸಿದಿರಲಿಲ್ಲವೋ ಏನೋ ನಾಯಿಯ ಮೇಲೆ ದಾಳಿ ಮಾಡದೆ ಹಾಗೆ ಬಿಟ್ಟು ಕಳಿಸಿದೆ. ಈ ವೀಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವೈರಲ್ ವೀಡಿಯೋ ನೋಡಿ,
Watch Video
Never back down,
Even if odds are against you🙏Filmed near Ngorogoro crater of Kenya.🎬: Unknown pic.twitter.com/pkaOKdoUiL
— Susanta Nanda IFS (@susantananda3) July 27, 2020