fbpx

Please assign a menu to the primary menu location under menu

ಬಾವಿಗೆ ಬಿದ್ದ ಮರಿಯನ್ನು ತನ್ನ ಪ್ರಾಣ ಪಣಕ್ಕಿಟ್ಟು ಕಾಪಾಡಿದ ತಾಯಿಕೋತಿ! ವೈರಲ್ ವೀಡಿಯೋ ನೋಡಿ

ತಾಯಿ-ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಮಕ್ಕಳು ಸಂಕಷ್ಟಕ್ಕೆ ಸಿಲುಕಿದಾಗ ತಾಯಿ ತನ್ನ ಸರ್ವಸ್ವವನ್ನೂ ಪಣಕ್ಕಿಟ್ಟು ಕಾಪಾಡುತ್ತಾಳೆ. ಇಲ್ಲೊಬ್ಬ ತಾಯಿ ಕೋತಿ ನೀರಿನ ತೊಟ್ಟಿಗೆ ಬಿದ್ದ ತನ್ನ ಮಗುವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಲೆಕ್ಕಿಸದೆ ನೀರಿಗೆ ಇಳಿದು ಕಾಪಾಡಿದೆ.

ಕೋತಿಮರಿಯೊಂದು ನೀರಿನ ತೊಟ್ಟಿಯೊಳಕ್ಕೆ ಬಿದ್ದು ಮೇಲೆ ಬರಲಾಗದೆ ಸಂಕಷ್ಟಕ್ಕೆ ಸಿಲುಕಿತ್ತು. ತನ್ನ ಮಗುವನ್ನು ಹುಡುಕುತ್ತಾ ಅಲ್ಲಿಗೆ ಬಂದ ತಾಯಿ ಕೋತಿ ತೊಟ್ಟಿಯಲ್ಲಿ ತನ್ನ ಮಗು ಬಿದ್ದಿರೋದನ್ನು ಗಮನಿಸಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ನೀರಿನ ತೊಟ್ಟಿಯೊಳಕ್ಕೆ ಇಳಿದು ತನ್ನ ಮಗುವನ್ನು ರಕ್ಷಿಸಿದೆ.

ಚಳಿಯಿಂದ ನಡುಗುತ್ತಿದ್ದ ತನ್ನ ಮರಿಯನ್ನು ಜೋರಾಗಿ ತಬ್ಬಿಕೊಂಡು ಕೋತಿ ಮೇಲಕ್ಕೆ ತಂದಿದೆ. ಈ ವೀಡಿಯೋವನ್ನು ಐಎಫ್‌ಎಸ್ ಅಧಿಕಾರು ಸುಶಾಂತ್ ನಂದ ಅವರು ಟ್ವೀಟ್ ಮಾಡಿದ್ದಾರೆ. ತಾಯಿಯ ಪ್ರೀತಿಯನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ, ಕಷ್ಟಕಾಲದಲ್ಲಿ ತಾಯಿಯೂ ಕಮಾಂಡೋ ಆಗಿ ಬದಲಾಗುತ್ತಾಳೆ ಎಂದು ಒಕ್ಕಳಿಕೆ ಬರೆದು ಟ್ವೀಟ್ ಮಾಡಿದ್ದಾರೆ.

ಈ ವೀಡಿಯೋ ನೋಡಿದ ಹಲವರು ತಾಯಿ ಕೋತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ವೀಡಿಯೋ ಮಾಡಿದ ವ್ಯಕ್ತಿಯ ವಿರುದ್ಧ ಕಿಡಿಕಾರಿದ್ದಾರೆ. ಕೋತಿ ಮರಿಯನ್ನು ನೀರಿನಿಂದ ಎತ್ತಿ ರಕ್ಷಿಸೋದು ಬಿಟ್ಟು ಅದರ ಸಂಕಷ್ಟವನ್ನು ವೀಡಿಯೋ ಮಾಡಿದ್ದು ತಪ್ಪು ಎಂದು ಅವರು ಬುದ್ದಿಹೇಳಿದ್ದಾರೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!