fbpx

Please assign a menu to the primary menu location under menu

ಕರಡಿಯ ಜೊತೆ ಪುಟ್ಟ ಮಗುವಿನ ಡ್ಯಾನ್ಸ್ ಹೇಗಿದೆ ನೋಡಿ, ವೈರಲ್ ವೀಡಿಯೋ

ಪ್ರಾಣಿ ಸಂಗ್ರಹಾಲಯದಲ್ಲಿ ಕರಡಿಯ ಜೊತೆ ಪುಟ್ಟ ಮಗುವೊಂದು ಸ್ಟೆಪ್ ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದೆ.

ಪ್ರಾಣಿ ಸಂಗ್ರಹಾಲಯದ ವೀಕ್ಷಣೆಗೆ ತೆರಳಿದ್ದ ಮಗು ಅಲ್ಲಿ ಈಜಾಡುತ್ತಿದ್ದ ಕರಡಿಯನ್ನು ಕಂಡು ಕುಣಿಯಲು ಆರಂಭಿಸಿದೆ. ಮಗುವನ್ನು ನೋಡಿದ ಕರಡಿಯೂ ಗಾಜಿನ ತಡೆಗೋಡೆ ಬಳಿ ಬಂದು ಮಗುವಿನ ಜೊತೆ ಕುಣಿದುಕುಪ್ಪಳಿಸಿದೆ.

ವೀಡಿಯೋ ನೋಡಿ ಹಲವರು ಕಮೆಂಟ್ ಮಾಡಿದ್ದು, ವಿಶ್ವದಾದ್ಯಂತ ಇರೋ ಮೃಗಾಲಯಗಳನ್ನು ಮುಚ್ಚಿ ಅಲ್ಲಿರುವ ಪ್ರಾಣಿಗಳನ್ನು ಮರಳಿ ಕಾಡಿಗೆ ಬಿಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!