fbpx

Please assign a menu to the primary menu location under menu

ತನ್ನಷ್ಟಕ್ಕೆ ತಾನು ಮರಿಗಳೊಂದಿಗೆ ಸಾಗುತ್ತಿದ್ದ ಸಿಂಹಕ್ಕೆ ಅಡ್ಡಸಿಕ್ಕ ಬೈಕ್ ಸವಾರರು, ಸಿಂಹ ಮಾಡಿದ್ದೇನು ನೋಡಿ (ವೈರಲ್ ವೀಡಿಯೋ)

ಗುಜರಾತ್‌ನ ಗಿರ್ ಅಭಯಾರಣ್ಯ ಸರಿಸುಮಾರು 500ಕ್ಕೂ ಹೆಚ್ಚು ಸಿಂಹಗಳನ್ನು ಹೊಂದಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಇಲ್ಲಿ ಸಿಂಹಗಳ ಗಣತಿ ಕಾರ್ಯ ನಡೆಯುತ್ತೆ. 2015ರಲ್ಲಿ ನಡೆದ ಗಣತಿ ಪ್ರಕಾರ 523 ಸಿಂಹಗಳು ಗಿರ್ ಅಭಯಾರಣ್ಯದಲ್ಲಿ ಪತ್ತೆಯಾಗಿತ್ತು.

ಭಾರತದ ಹಲವು ಭಾಗಗಳಲ್ಲಿ ಸಿಂಹಗಳು ಜನರೊಂದಿಗೆ ಬೆರೆತು ಜೀವಿಸುತ್ತಿದೆ. ಇದರಲ್ಲಿ ಗುಜರಾತ್‌ನ ಗಿರ್ ಅಭಯಾರಣ್ಯ ಕೂಡ ಒಂದು. ಈ ಅಭಯಾರಣ್ಯದ ಸುತ್ತಮುತ್ತ ವಾಸಿಸುವ ಜನರಿಗೆ ಪ್ರತಿದಿನ ಸಿಂಹಗಳ ಭೇಟಿ ಮಾಮೂಲಿ. ಇದೀಗ ಇದೇ ಗಿರ್ ಅಭಯಾರಣ್ಯದ ವಿಡಿಯೋವೊಂದು ವೈರಲ್ ಆಗಿದೆ.

ಕಾಡಿನ ದಾರಿಯಲ್ಲಿ ಸಿಂಹವೊಂದು ಮರಿಗಳೊಂದಿಗೆ ಸಾಗುತ್ತಿರುವಾಗ ಬೈಕ್ ಒಂದು ಎದುರುಗಡೆಯಿಂದ ಬಂದಿದೆ. ಸಿಂಹವನ್ನು ನೋಡಿದ ಬೈಕ್ ಸವಾರರು ತಕ್ಷಣ ಬೈಕ್ ಅನ್ನು ನಿಲ್ಲಿಸಿದ್ದಾರೆ. ಸಿಂಹ ಕೂಡ ಬೈಕ್ ಸವಾರರಿಗೆ ಯಾವುದೇ ತೊಂದರೆ ಮಾಡದೆ ತಾನು ಸಾಗುತ್ತಿದ್ದ ದಾರಿಯನ್ನು ಬದಲಿಸಿ ತನ್ನ ಮರಿಗಳೊಂದಿಗೆ ಕಾಡಿನ ದಾರಿಯೊಳಕ್ಕೆ ಸಾಗಿ ಮರೆಯಾಗಿದೆ.

ಈ ವೀಡಿಯೊವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಇದನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಗಿರ್ ಅಭಯಾರಣ್ಯದಲ್ಲಿ ಸಿಂಹಗಳು ಮತ್ತು ಅಲ್ಲಿನ ಜನರ ಬಾಂಧವ್ಯ ಯಾವರೀತಿ ಇದೆ ಎಂಬುದಕ್ಕೆ ಈ ವೀಡಿಯೋ ಸಾಕ್ಷಿ. ವೈರಲ್ ವೀಡಿಯೋ ನೋಡಿ,

Watch Video

error: Content is protected !!