fbpx

ಬೆಕ್ಕನ್ನು ಹಿಡಿದು ಹಸಿಹಸಿಯಾಗಿ ತಿಂದು ತೇಗಿದ ಭೂಪ, ಶಾಕಿಂಗ್ ವಿಡಿಯೋ ವೈರಲ್

ಚೀನಾ ಹಾಗೂ ಇತರ ಕೆಲವು ದೇಶಗಳಲ್ಲಿ ಸಿಕ್ಕಸಿಕ್ಕ ಪ್ರಾಣಿಗಳನ್ನು ಹಿಡಿದು ತಿನ್ನುತ್ತಾರೆ. ಕರೋನಾ ಸೊಂಕಿನಂತಹ ಮಹಾಮಾರಿ ಕೂಡ ಚೀನಾದ ಕಾಡು ಪ್ರಾಣಿಗಳ ಮಾರುಕಟ್ಟೆಯೊಂದರಿಂದ ಬಂದಿರೋದು ಎಂಬುದು ಹಲವರ ವಾದ. ಚೀನಾ, ಕೊರಿಯಾದಂತಹ ದೇಶಗಳಲ್ಲಿ ಪ್ರಾಣಿಗಳನ್ನು ಬೇಯಿಸದೆ ಹಸಿಯಾಗಿ ತಿನ್ನುವ ಜನರೂ ಇದ್ದಾರೆ.

ಇದೀಗ ಬೆಚ್ಚಿಬೀಳಿಸುವ ವೀಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಜೀವಂತ ಬೆಕ್ಕನ್ನು ಹಿಡಿದು ಹಸಿಹಸಿಯಾಗಿ ತಿಂದಿದ್ದಾನೆ. ಈ ಘಟನೆ ನಡೆದಿರೋದು ಇಂಡೋನೇಶ್ಯಾದ ಜಕಾರ್ತಾದಲ್ಲಿ. ಜಕಾರ್ತದಲ್ಲಿರುವ ಮಾರ್ಕೆಟ್ ಒಂದಕ್ಕೆ ಆಗಮಿಸಿದ ವ್ಯಕ್ತಿ ಅಲ್ಲಿ ಸಂಚರಿಸುತ್ತಿದ್ದ ಬೆಕ್ಕನ್ನು ಹಿಡಿದು, ಜೀವಂತವಾಗಿ ಕಚ್ಚಿಕಚ್ಚಿ ತಿಂದಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ವೀಡಿಯೋ ವೈರಲ್ ಆಗುತ್ತಿದ್ದಂತೆ, ಪೋಲೀಸರು ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಆ ಪ್ರದೇಶದ ಜನರಲ್ಲಿ ಮನವಿ ಮಾಡಿದ್ದರು. ಕೊನೆಗೂ ಬೆಕ್ಕನ್ನು ಕೊಂದ ವ್ಯಕ್ತಿಯ ಕುಟುಂಬಸ್ತರೆ ಆತನನ್ನು ಪೋಲೀಸರ ಕೈಗೆ ಒಪ್ಪಿಸಿದ್ದಾರೆ. ವ್ಯಕ್ತಿಯನ್ನು 69ವರ್ಷ ವಯಸ್ಸಿನ ‘ಅಬಾಹ್ ಗ್ರಾನ್ಡೊಂಗ್’ ಎಂದು ಗುರುತಿಸಲಾಗಿದ್ದು, ತನ್ನ ಶಕ್ತಿಯನ್ನು ಪ್ರದರ್ಶಿಸಲು ತಾನು ಹೀಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ತಾನು ಅದನ್ನು ಮೊಲದ ಮರಿಯೆಂದು ತಿಳಿದು ತಿಂದಿರೋದು, ವೀಡಿಯೋ ವೈರಲ್ ಆದ ನಂತರವೇ ಅದು ಬೆಕ್ಕು ಎಂದು ಗೊತ್ತಾಗಿದ್ದು ಎಂದು ಆತ ಈ ಸಂದರ್ಭದಲ್ಲಿ ಹೇಳಿದ್ದಾನೆ. ಜಕಾರ್ಥ ಪ್ರಾಣಿ ದಯಾ ಸಂಘಟನೆಯವರು ಈ ಘಟನೆಯ‌ನ್ನು ತೀವ್ರವಾಗಿ ಖಂಡಿಸಿದ್ದು, ಅಮಾಯಕ ಪ್ರಾಣಿಗಳ ಮೇಲೆ ಈ ರೀತಿ ಕ್ರೂರತೆ ಪ್ರದರ್ಶಿಸುವವರು ಮುಂದೆ ಪುಟ್ಟ ಮಕ್ಕಳನ್ನೂ ಕೊಲ್ಲಲು ಹೇಸಲ್ಲ, ಈತನಿಗೆ ಕಠಿಣ ಶಿಕ್ಷೆ ಕೊಡಿ ಎಂದಿದ್ದಾರೆ.

ಈ ವೀಡಿಯೋ ಕಳೆದ ವರ್ಷ ಆಗಸ್ಟ್‌ನಲ್ಲಿ ಚಿತ್ರಿಸಲಾಗಿದ್ದು, ಇದೀಗ ಮತ್ತೆ ವೈರಲ್ ಆಗಿದೆ. ಮನುಷ್ಯ ಎಷ್ಟರ ಮಟ್ಟಿಗೆ ವ್ಯಾಘ್ರನಾಗಬಲ್ಲ ಎಂಬುದಕ್ಕೆ ಈ ವೀಡಿಯೋ ಸಾಕ್ಷಿ. ವೈರಲ್ ವೀಡಿಯೋ ನೋಡಿ,

Watch Video

error: Content is protected !!