fbpx

Please assign a menu to the primary menu location under menu

ಕೊರೋನಾ ಭಯ? ರಸ್ತೆಯಲ್ಲಿ ಸಿಕ್ಕ ಬಟ್ಟೆಯಿಂದ ಮುಖಮೂತಿ ಮುಚ್ಚಿಕೊಂಡ ಕೋತಿ, ವೈರಲ್ ವಿಡಿಯೋ ನೋಡಿ

ಕೊರೋನಾ ಇಡೀ ವಿಶ್ವದಲ್ಲಿಯೇ ಜನಜೀವನವನ್ನು ಅಸ್ಥವ್ಯಸ್ತವಾಗಿಸಿದೆ. ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ವಿಶ್ವವನ್ನೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಈಗಾಗಲೇ ಸಾವಿರಾರು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಈಗ ಪ್ರಪಂಚದಾದ್ಯಂತ ಜನರು ಸೋಂಕಿನಿಂದ ಪಾರಾಗಲು ಮಾಸ್ಕ್, ಸ್ಯಾನಿಟೈಸರ್‌ಗಳ ಮೊರೆ ಹೋಗಿದ್ದಾರೆ. ಎಲ್ಲಿನೋಡಿದರೂ ಮಾಸ್ಕ್ ಧರಿಸಿದ ಜನರೇ ಕಾಣಸಿಗುತ್ತಾರೆ. ಕೆಲ ಕಡೆಗಳಲ್ಲಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸೋದನ್ನು ಕಡ್ಡಾಯ ಮಾಡಿದೆ‌.

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಕೋತಿಯೊಂದು ರಸ್ತೆಯಲ್ಲಿ ಸಿಕ್ಕ ಬಟ್ಟೆಯಿಂದ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದೆ. ಜನರು ಮಾಸ್ಕ್ ಧರಿಸೋದನ್ನ ಗಮನಿಸಿದ ಕೋತಿ ಅವರನ್ನು ಅನುಸರಿಸಲು ಹೋಗಿ ಕೈಗೆ ಸಿಕ್ಕ ಬಟ್ಟೆಯಿಂದ ಮುಖ ಸುತ್ತಿಕೊಂಡಂತೆ ಭಾಸವಾಗುತ್ತಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿ,

Watch Video

error: Content is protected !!