fbpx

Please assign a menu to the primary menu location under menu

ಹಸಿವಿನಿಂದ ನರಳುತ್ತಿದ್ದ ನಾಯಿ ಮರಿಗಳಿಗೆ ಹಾಲುಣಿಸಿದ ಗೋಮಾತೆ, ಮನಮುಟ್ಟುವ ಈ ವೀಡಿಯೋ ನೋಡಿ

ತಾಯಿಯ ಪ್ರೀತಿ ವಾತ್ಸಲ್ಯದ ಕುರಿತು ಅದೆಷ್ಟೇ ಹೊಗಳಿದರು ಸಾಲದು. ಜಗತ್ತಿನ ಅತಿ ಪವಿತ್ರವಾದ ಸಂಬಂಧ ಎಂದರೆ ಅದು ತಾಯಿ ಮಗುವಿನ ನಡುವಿನ ನಿಸ್ವಾರ್ಥ ಪ್ರೀತಿಯ ಸಂಬಂಧ. ಈ ಪ್ರೀತಿ ಮನುಷ್ಯರಷ್ಟಲ್ಲೇ ಅಲ್ಲ ಪ್ರಾಣಿಗಳಲ್ಲೂ ಕಾಣಸಿಗುತ್ತದೆ.

ಪ್ರಾಣಿಗಳು ಕೂಡ ಮನುಷ್ಯರಂತೆ ತಮ್ಮ ಮಕ್ಕಳನ್ನು ಅದೆಷ್ಟೇ ಕಷ್ಟ ಬ‌ಂದರೂ ಸಾಕಿಸಲಹುತ್ತದೆ. ಕೆಲ ಪ್ರಾಣಿಗಳು ತಮ್ಮದಲ್ಲದ ಅಥವಾ ಬೇರೆ ಪ್ರಾಣಿಗಳ ಮಕ್ಕಳ‌ನ್ನೂ ಸಾಕಿಸಲಹುವ ಅನೇಕ ಘಟನೆಗಳನ್ನು ನಾವು ನೋಡಿದ್ದೆವೆ. ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿಯೂ ಅಂತಹದ್ದೇ ಸಂಬಂಧವನ್ನು ನಾವು ನೋಡಲಿದ್ದೇವೆ.

ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿದೆ. ತಾಯಿ ಹಸುವೊಂದು ಶ್ವಾನದ ಮರಿಗಳಿಗೆ ಹಾಲುಣಿಸುವ ವೀಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ‌.

ಹಸಿವಿನಿಂದ ಕಂಗೆಟ್ಟಿದ್ದ ನಾಯಿ ಮರಿಗಳಿಗೆ ಹಾಲುಣಿಸಿ ತಾಯಿ ಪ್ರೀತಿ ತೋರಿದ ಗೋಮಾತೆಯ ವೀಡಿಯೋ ಮನಮುಟ್ಟುವಂತಿದೆ. ಸನಾತನ ಹಿಂದೂ ಧರ್ಮದಲ್ಲಿ ಹಸುವನ್ನು ತಾಯಿಯ ಸಮಾನವಾಗಿ ದೇವರ ಸ್ಥಾನದಲ್ಲಿ ಇಟ್ಟು ಪೂಜಿಸಲಾಗುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಈ ವೀಡಿಯೋವನ್ನು ಕಾಣಬಹುದಾಗಿದೆ.

ಜಾತಿ, ಕುಲ, ಮೇಲು, ಕೀಳು ಎಂದು ಬಡಿದಾಡಿ ಸಾಯುವವರು ಈ ವೀಡಿಯೋದಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ತನ್ನದಲ್ಲದ ಬೇರೆ ಜಾತಿಯ ಪ್ರಾಣಿಯ ಮಗುವಿಗೆ ಹಾಲುಣಿಸುವ ಗೋಮಾತೆ ನಿಜಕ್ಕೂ ಶ್ರೇಷ್ಠವಾಗಿ ಕಾಣುತ್ತಾಳೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!