fbpx

ಇನ್ನೇನು ಜೆಸಿಬಿ ಅಡಿಗೆ ಬಿದ್ದು ಸಾಯಲಿದ್ದ ಯುವಕನನ್ನು ದೇವರಂತೆ ಬಂದು ಕಾಪಾಡಿದ ಬೊಲೇರೋ ವಾಹನ, ಭೀಕರ ಅಪಘಾತದ ದೃಶ್ಯ ವೈರಲ್

ದೇವರು ಯಾವ ರೂಪದಲ್ಲಿ ಬಂದು ನಮ್ಮನ್ನು ರಕ್ಷಿಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ದೇವರು ಕಾರಿನ ರೂಪದಲ್ಲಿ ಬಂದು ಯುವಕನ ಪ್ರಾಣವನ್ನು ಕಾಪಾಡಿದ್ದಾನೆ.

ಹೌದು, ಇನ್ನೇನು ಜೆಸಿಬಿಗೆ ಸಿಲುಕಿ ಸಾಯಲಿದ್ದ ಯುವಕನನ್ನು ದೇವರು ಕಾರಿನ ರೂಪದಲ್ಲಿ ಬಂದು ಕಾಪಾಡಿದ್ದಾರೆ. ಘಟನೆ ನಡೆದಿರೋದು ಕೇರಳದ ಕೊಝಿಕೊಡೆ-ಪಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ. ರಸ್ತೆ ಬದಿ ಬೈಕ್ ನಿಲ್ಲಿಸಿ ಅದರಲ್ಲಿ ಕೂತಿದ್ದ ಯುವಕನ ಮೇಲೆ ಹಿಂದುಗಡೆಯಿಂದ ಅತೀವೇಗವಾಗಿ, ಅಜಾರುಕತೆಯಿಂದ ಬಂದ ಜೆಸಿಬಿ ಇನ್ನೇನು ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಬೊಲೇರೋ ಕಾರು ಬೈಕ್ ಸವಾರನನ್ನು ದಾಟಿ ಜೆಸಿಬಿಗೆ ಡಿಕ್ಕಿ ಹೊಡೆದಿದೆ.


Continue Reading

ಬೊಲೇರೋ ಡಿಕ್ಕಿಯ ರಭಸಕ್ಕೆ ಜೆಸಿಬಿ ತನ್ನ ಪಥಬದಲಿಸಿ ರಸ್ತೆಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಒಂದು ವೇಳೆ ಆ ಸಮಯದಲ್ಲಿ ಬೊಲೇರೋ ವಾಹನ ಬರದೆ ಹೋಗಿದ್ದರೆ ಬೈಕ್ ಸವಾರ ಜೆಸಿಬಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು.

ಇದನ್ನೂ ಓದಿ:  ತಾಯಿ ಬರೋದು ಒಂದು ನಿಮಿಷ ತಡವಾಗಿದ್ರೂ ಮಗುವಿನ ಪ್ರಾಣವೇ ಹೋಗ್ತಾ ಇತ್ತು! ಶಾಕಿಂಗ್ ವಿಡಿಯೋ ನೋಡಿ

ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂಬುದೆ ಖುಷಿಯ ವಿಚಾರ. ಕಾರಿನಲ್ಲಿದ್ದವರಿಗೂ, ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿದೆಯಷ್ಟೇ, ಜೆಸಿಬಿ ಸವಾರನಿಗೆ ಕೂಡ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಭೀಕರ ಅಪಘಾತದ ವೀಡಿಯೋ ನೋಡಿ,

Watch Video

Trending Short Videos

close

This will close in 26 seconds

error: Content is protected !!