fbpx

Please assign a menu to the primary menu location under menu

ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿ 49ಪಾಕಿಗಳ ರುಂಡಚೆಂಡಾಡಿದ್ದ ಕರಾವಳಿಯ ವೀರ ಯೋಧ

ಕಾರ್ಗಿಲ್ ಯುದ್ಧ ನಡೆದು 21ವರ್ಷಗಳು ಉರುಳಿದೆ, ಕಾರ್ಗಿಲ್ ಯುದ್ಧದಲ್ಲಿ ದೇಶದ ರಕ್ಷಣೆಗಾಗಿ ಪ್ರಾಣತೆತ್ತು ಹುತಾತ್ಮರಾದ ವೀರ ಯೋಧರ ಸ್ಮರಣೆ ಮಾಡೋದು ನಮ್ಮೆಲ್ಲರ ಕರ್ತವ್ಯ. ಭಾರತದ ಭೂಭಾಗದೊಳಗೆ ಕಳ್ಳರಂತೆ ನುಸುಳಿ ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಿ ಪಾಪಿಗಳನ್ನು ಅಟ್ಟಾಡಿಸಿ ಗಡಿಬಿಟ್ಟು ಓಡಿಹೋಗುವಂತೆ ಮಾಡಿದ ನಮ್ಮ ವೀರಯೋಧರ ತ್ಯಾಗ ಬಲಿದಾನವನ್ನು ಮರೆಯಲು ಸಾಧ್ಯವೇ.

ಭಾರತೀಯ ಯೋಧರ ಕೆಚ್ಚೆದೆಯ ಹೋರಾಟದಿಂದಾಗಿ ಕಾರ್ಗಿಲ್‌ನಲ್ಲಿ ತ್ರಿವರ್ಣ ಧ್ವಜ ಇಂದಿಗೂ ಸ್ವಂಚ್ಛಂದವಾಗಿ ಹಾರಾಡುತ್ತಿದೆ. ಭಾರತ ಮಾತೆಯ ರಕ್ಷಣೆಗಾಗಿ ಹೋರಾಡಿ ಭಾರತಕ್ಕೆ ವಿಜಯದ ಕಿರೀಟ ತೊಡಿಸಿದ ವೀರಸೇನಾನಿಗಳಲ್ಲಿ ಕರಾವಳಿಯ ಹೆಮ್ಮೆಯ ಯೋಧ ಪ್ರವೀಣ್ ಶೆಟ್ಟಿಯವರೂ ಒಬ್ಬರು. ದಕ್ಷಿಣಕನ್ನಡ ಜಿಲ್ಲೆಯ ಕುಂಪಲ ನಿವಾಸಿ ವೀರ ಯೋಧ ಪ್ರವೀಣ್ ಶೆಟ್ಟಿಯವರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಿಶ್ವದ ಏಕೈಕ 244 ಹೆವಿ ಮೋರ್ಟಾರ್ ರೆಜಿಮೆಂಟ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ತನ್ನ 18ನೇ ವಯಸ್ಸಿನಲ್ಲಿ ಭಾರತೀಯ ಸೇನೆಯನ್ನು ಸೇರಿದ ಪ್ರವೀಣ್ ಶೆಟ್ಟಿಯವರು, ಸೇನೆ ಸೇರಿದ ಎರಡೇ ವರ್ಷದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಬೇಕಾಯಿತು. ರಜೆಯ ಮೇಲೆ ಊರಿಗೆ ಬಂದ ಒಂದೇ ದಿನಕ್ಕೆ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆಯಿಂದ ಬುಲಾವ್ ಬಂದಿತ್ತು. ಹೀಗೆ ಸೇವೆಗೆ ಮರಳಿದ ಪ್ರವೀಣ್ ಶೆಟ್ಟಿಯವರಿಗೆ ಕಂಡಿದ್ದು ಯುದ್ಧದಲ್ಲಿ ಹುತಾತ್ಮರಾಗಿದ್ದ ಭಾರತೀಯ ಯೋಧರ ಮೃತ ದೇಹಗಳ ರಾಶಿ. ಆದರೂ ಎದೆಗುಂದದ ಪ್ರವೀಣ್ ಶೆಟ್ಟಿಯವರು ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದರು.

ಸತತ 16ದಿನಗಳ ಕಾಲ ಸರಿಯಾದ ಊಟ, ನಿದ್ದೆ ಇಲ್ಲದಿದ್ದರೂ ಕೆಚ್ಚೆದೆಯಿಂದ ಹೋರಾಡಿದ ಪ್ರವೀಣ್ ಶೆಟ್ಟಿಯವರ ರೆಜಿಮೆಂಟ್ 49ಪಾಕಿಗಳ ರುಂಡವನ್ನು ಚೆಂಡಾಡಿತ್ತು. ಅಲ್ಲದೆ ಅತೀ ಮುಖ್ಯವಾದ ತೊಲೊಲಿಂಗ್ ಪ್ರದೇಶವನ್ನು ಪ್ರವೀಣ್ ಶೆಟ್ಟಿಯವರ ತಂಡ ಪಾಕಿಗಳಿಂದ ವಶಪಡಿಸಿಕೊಂಡಿತು ಹಾಗೂ ಟೈಗರ್ ಹಿಲ್ಸ್ ಅನ್ನು ಪಾಕಿಗಳಿಂದ ವಶಪಡಿಸಿಕೊಳ್ಳಲು ಕೂಡ ಹೋರಾಡಿದೆ.

ಪ್ರವೀಣ್ ಶೆಟ್ಟಿಯವರು ಹದಿನಾರು ವರುಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, ಇದರಲ್ಲಿ 11 ವರ್ಷ ಕಾಶ್ಮೀರದಲ್ಲೇ ಸೇವೆ ಮಾಡಿದ್ದಾರೆ. ತಮ್ಮ ಸೇವೆ 8ಸೇನಾ ಪದಕಗಳನ್ನು ಪಡೆದಿದ್ದಾರೆ, ಇದರಲ್ಲಿ 9 ವರ್ಷದ ಸೇನಾ ಪದಕ, 50 ವರ್ಷದ ಸೇನಾ ಪದಕ, ಫೀಲ್ಡ್ ಸೇನಾ ಪದಕ, ಡಬಲ್ ಫೀಲ್ಡ್ ಸೇನಾ ಪದಕ, ಆಪರೇಷನ್ ವಿಜಯ್, ಆಪರೇಷನ್ ರಕ್ಷಕ್, ಆಪರೇಷನ್ ಪರಾಕ್ರಮ್, ಆಪರೇಷನ್ ವಿಜಯ್ ಸ್ಟಾರ್ ಪದಕಗಳೂ ಸೇರಿವೆ. ಆಪರೇಷನ್ ವಿಜಯ್ ಸ್ಟಾರ್ ಪದಕ ಪಡೆದ ಕರಾವಳಿಯ ಏಕೈಕ ಯೋಧ ಎಂಬ ಹೆಗ್ಗಳಿಕೆಗೆ ಪ್ರವೀಣ್ ಶೆಟ್ಟಿ ಪಾತ್ರರಾಗಿದ್ದಾರೆ.

ಸೇನೆಯಿಂದ ನಿವೃತ್ತಿ ಪಡೆದ ಬಳಿಕ ಮಂಗಳೂರಿನ ಬಲ್ಮಠದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಪ್ರವೀಣ್ ಶೆಟ್ಟಿ ಕರ್ತವ್ಯ ಮಾಡುತ್ತಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಪ್ರಾಣವನ್ನು ಮುಡಿಪಾಗಿಟ್ಟು ದೇಶಕ್ಕಾಗಿ ಹೋರಾಡಿದ ಪ್ರವೀಣ್ ಶೆಟ್ಟಿಯವರಿಗೆ ಹಾಗೂ ಎಲ್ಲಾ ವೀರಯೋಧರಿಗೆ ನಮ್ಮದೊಂದು ಹೃದಯಪೂರ್ವಕ ಸೆಲ್ಯೂಟ್.

error: Content is protected !!