fbpx

ಭಾರತೀಯ ಯೋಧರ ಭರ್ಜರಿ ಭೇಟೆ, ಉರುಳಿ ಬಿತ್ತು ಉಗ್ರರ ಹೆಣ (ವೀಡಿಯೋ)

ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಇಬ್ಬರು ಇ’ಸ್ಲಾಮಿಕ್ ಉ’ಗ್ರರ ಹತರಾಗಿದ್ದಾರೆ. ಸೇನೆಯ ಎನ್ಕೌಂಟರ್‌ಗೆ ಹತರಾದ ಇಬ್ಬರು ಉಗ್ರರಲ್ಲಿ ಒಬ್ಬಾತ ಲಷ್ಕರ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಆಗಿದ್ದು, ಇನ್ನೊಬ್ಬ ಅದೇ ಸಂಘಟನೆಯ ಉಗ್ರನಾಗಿದ್ದಾನೆ.

ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಇಂದು ಮುಂಜಾನೆಯಿಂದಲೇ ಜಮ್ಮು-ಕಾಶ್ಮೀರ ಪೋಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದು, ಉಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರಿದಿದ್ದಾರೆ. ಸೈನಿಕರು ತಮ್ಮನ್ನು ಸುತ್ತುವರಿದಿದ್ದಾರೆ ಎಂದು ತಿಳಿದಿದ್ದೇ ತಡ ಉಗ್ರರು ಸೈನಿಕ ಮೇಲೆ ಗುಂಡಿನಮಳೆ ಸುರಿಸಲು ಶುರುವಿಟ್ಟಿದ್ದಾರೆ.

ಯೋಧರು ಪ್ರತಿದಾಳಿ ನಡೆಸಿದ್ದು, ಇಬ್ಬರು ಉಗ್ರರು ಹತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಓರ್ವ ಯೋಧನಿಗೆ ಗಾಯವಾಗಿರೋ ಬಗ್ಗೆ ವರದಿಯಾಗಿದೆ. ವೀರ ಯೋಧನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೈನಿಕರ ಎನ್ಕೌಂಟರ್‌ನಲ್ಲಿ ಹತರಾಗಿರೋ ಇಬ್ಬರು ಉಗ್ರರಲ್ಲಿ ಒಬ್ಬಾತ ಲಷ್ಕರ್-ಇ-ತೊಯ್ಬಾ ಉಗ್ರಸಂಘಟನೆಯ ಉನ್ನತ ಕಮಾಂಡರ್ ಇರ್ಫಾಕ್ ರಶೀದ್ ಎಂದು ಗುರುತಿಸಲಾಗಿದ್ದು, ಈತ 2018ರಿಂದ ಎಲ್‌ಇ‌ಟಿ ಉಗ್ರ ಸಂಘಟನೆಯಲ್ಲಿ ಕಮಾಂಡರ್ ಆಗಿದ್ದ. ಇನ್ನೊಬ್ಬ ಉಗ್ರ ಪುಲ್ವಾಮಾ ನಿವಾಸಿಯಾಗಿದ್ದು, ಆತನನ್ನು ಇಜಾಜ್ ಭಟ್ ಎಂದು ಗುರುತಿಸಿದ್ದಾರೆ. ಈತನೂ ಎಲ್‌ಇ‌ಟಿ ಉಗ್ರಸಂಘಟನೆಯ ಪ್ರಮುಖ ಉಗ್ರರಲ್ಲಿ ಒಬ್ಬ ಎಂದು ತಿಳಿದುಬಂದಿದೆ.

Watch Video

error: Content is protected !!