fbpx

ಶೋಕಿಗಾಗಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಭೂಪರಿಗೆ ಏನಾಯ್ತು ನೋಡಿ, ವೈರಲ್ ವೀಡಿಯೋ

ಬೈಕ್ ಸ್ಟಂಟ್ ಮಾಡಲು ಹೋಗಿ ಪ್ರತಿವರ್ಷ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ, ಆದರು ಕೆಲ ಪುಂಡರಿಗೆ ಇದರ ಯಾವುದೇ ಭಯವಿಲ್ಲ. ತಾವು ಜೀವದ ಆಸೆ ಬಿಟ್ಟು ಸ್ಟಂಟ್ ಮಾಡೋದರ ಜೊತೆಗೆ ಇತರರನ್ನೂ ಸಾವಿನದವಡೆಗೆ ದೂಡುತ್ತಾರೆ

ಇಂತಹದ್ದೇ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಯುವಕರಿಬ್ಬರು ತಮ್ಮ ಬೈಕ್‌ನಲ್ಲಿ ಹಾವು ಚಲಿಸೋ ರೀತಿ ಅಡ್ಡಾದಿಡ್ಡಿ ಚಲಾಯಿಸಿ ಸ್ಟಂಟ್ ಮಾಡಲು ಹೋಗಿ ಅಪಘಾತಕ್ಕೀಡಾಗಿದ್ದಾರೆ.


Continue Reading

ನಡು ರಸ್ತೆಯಲ್ಲೇ ಸಂಚಾರಿ ನಿಯಮ ಉಲ್ಲಂಘಿಸಿ ಮನಸೋ ಇಚ್ಛೆ ಬೈಕ್ ಸ್ಟಂಟ್ ಮಾಡುವ ಮೂಲಕ ಅಪಘಾತಕ್ಕೀಡಾಗುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರು ಸ್ಟಂಟ್ ಮಾಡೋ ವೇಳೆ ಎದುರುಗಡೆಯಿಂದ ಪಿಕ್‌ಅಪ್ ವಾಹನ ಬಂದಿದ್ದು ಯುವಕರು ತಮ್ಮ ಬೈಕ್ ಮೇಲಿನ ಹಿಡಿತ ಕಳೆದುಕೊಂಡು ತಮ್ಮ ಎಡಭಾಗಕ್ಕೆ ಬಿದ್ದಿದ್ದಾರೆ.

ಇದನ್ನೂ ಓದಿ:  ಎರಡು ಮರದ ದಿಣ್ಣೆಗಳ ಮೇಲೆ ಕಾರು ಚಲಾಯಿಸುವ ಸಾಹಸಕ್ಕೆ ಕೈ ಹಾಕಿದ! ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಒಂದು ವೇಳೆ ಬೈಕ್ ಬಲಗಡೆಗೆ ಪಲ್ಟಿ ಆಗಿದ್ದರೆ ಯುವಕರ ಮೇಲೆಯೆ ಪಿಕಪ್ ವಾಹನ ಸಂಚರಿಸಿ ಪ್ರಾಣಾಪಾಯಕ್ಕೀಡಾಗುವ ಸಾಧ್ಯತೆ ಇತ್ತು. ಈ ಘಟನೆ ಎಲ್ಲಿ ಸಂಭವಿಸಿದ್ದು, ಬೈಕ್ ಸವಾರರು ಯಾರು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ವೈರಲ್ ವೀಡಿಯೋ ನೋಡಿ,

Watch Video

Trending Short Videos

close

This will close in 26 seconds

error: Content is protected !!