fbpx

ಕ್ಷಣಮಾತ್ರದಲ್ಲಿ ಸಮುದ್ರಕ್ಕೆ ಜಿಗಿದು ಶಾರ್ಕ್ ದಾಳಿಯಿಂದ ಮಗುವನ್ನು ರಕ್ಷಿಸಿದ ಪೋಲೀಸ್, ವೀಡಿಯೋ ಸಖತ್ ವೈರಲ್

ಸಮುದ್ರದ ದಡದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಶಾರ್ಕ್ ಮೀನು ದಾಳಿ ಮಾಡಲು ಬಂದಿದ್ದು, ಪೋಲೀಸ್ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಮೇರಿಕಾದ ಕೊಕೊ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಖತ್ ವೈರಲ್ ಆಗಿದೆ.

ಜುಲೈ 16ರಂದು ಈ ಘಟನೆ ನಡೆದಿದ್ದು, ರಜೆಯಲ್ಲಿದ್ದ ಅಧಿಕಾರಿ ಆಡ್ರಿಯಾನ್ ಕೊಸಿಕಿ ತನ್ನ ಹೆಂಡತಿ ಜೊತೆಗೆ ಫ್ಲೋರಿಡಾದ ಕಡಲ ಕಿನಾರೆಯಲ್ಲಿ ನಡೆಯುತ್ತಾ ಸಾಗಿದ್ದರು. ಇದೇ ವೇಳೆಯಲ್ಲಿ ನೀರಿನಲ್ಲಿ ಆಡುತ್ತಿದ್ದ ಸಣ್ಣ ಹುಡುಗನ ಮೇಲೆ ದಾಳಿ ಮಾಡಲು ಶಾರ್ಕ್ ಮೀನೊಂದು ಬರೋದನ್ನ ಅಧಿಕಾರಿ ಆಡ್ರಿಯಾನ್ ಗಮನಿಸಿದ್ದಾನೆ.

ತಕ್ಷಣ ನೀರಿಗೆ ಹಾರಿದ ಅಧಿಕಾರಿ ಶಾರ್ಕ್‌ನಿಂದ ಮಗುವನ್ನು ರಕ್ಷಿಸಿ ದಡಕ್ಕೆ ಎಳೆದು ತಂದಿದ್ದಾರೆ. ಒಂದು ವೇಳೆ ಅಧಿಕಾರಿ ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಳ್ಳದೆ ಹೋಗಿದ್ದರೆ ಮಗು ಶಾರ್ಕ್‌ಗೆ ಆಹಾರವಾಗುತ್ತಿತ್ತು.

ಹೀಗೆ ಮೂಲಕ ಹುಡುಗನ ಪ್ರಾಣವನ್ನು ಅಧಿಕಾರಿ ರಕ್ಷಿಸಿದ್ದಾರೆ. ಅಧಿಕಾರಿಯ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!