fbpx

ರಭಸವಾಗಿ ಹರಿಯುವ ನದಿಯ ಮಧ್ಯೆ ಸೆಲ್ಫಿ ತೆಗೆಯಲು ಹೋಗಿ ಸಿಕ್ಕಿಹಾಕಿಕೊಂಡ ಯುವತಿಯರು, ಮುಂದೇನಾಯ್ತು ನೋಡಿ

ಸೆಲ್ಫಿ ಗೀಳು ಜನರನ್ನು ಯಾವಮಟ್ಟಕ್ಕೆ ಅಪಾಯಕ್ಕೆ ದೂಡುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಪಾಯವೆಂದೂ ಗೊತ್ತಿದ್ರೂ ತುಂಬಿ ಹರಿಯುತ್ತಿದ್ದ ನದಿಯ ಮಧ್ಯೆ ಸೆಲ್ಫಿ ತೆಗೆಯಲು ಹೋದ ಯುವತಿಯರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಮಧ್ಯಪ್ರದೇಶದ ಚಿಂದ್ವಾರದಲ್ಲಿ ತುಂಬಿ ಹರಿಯುತ್ತಿದ್ದ ನದಿಯೊಂದಕ್ಕೆ ಸೆಲ್ಫಿ ತೆಗೆಯಲು ಹೋದ ಯುವತಿಯರು ಸಂಕಷ್ಟಕ್ಕೆ ಸಿಲುಕಿದ್ದರು. ಭಾರೀ ಮಳೆಯಿಂದಾಗಿ ನದಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು, ಸೆಲ್ಫಿ ತೆಗೆಯಲು ಹೋದ ಯುವತಿಯರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು.

ಕೊನೆಗೆ ಪೋಲೀಸರು ಹಾಗೂ ಸ್ಥಳೀಯರು ಇಬ್ಬರು ಯುವತಿಯರನ್ನೂ ನೀರಿನಲ್ಲಿ ಕೊಚ್ಚಿ ಹೋಗೋದರಿಂದ ರಕ್ಷಿಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!