fbpx

Please assign a menu to the primary menu location under menu

100ರೂ ಮೂಮೂಲಿ ನೀಡಿಲ್ಲ ಎಂದು ಬಾಲಕನ ಮೊಟ್ಟೆ ಬಂಡಿ ಪಲ್ಟಿಮಾಡಿದ ಅಧಿಕಾರಿ, ಸ್ಥಳೀಯರು ಏನು ಮಾಡಿದ್ರು ನೋಡಿ (ವೀಡಿಯೋ)

ಹೊಟ್ಟೆಪಾಡಿಗಾಗಿ ತಳ್ಳು ಬಂಡಿಯಲ್ಲಿ ಮೊಟ್ಟೆಗಳನ್ನು ಮಾರುತ್ತಿದ್ದ ಬಾಲಕನ ಮೇಲೆ ಪಾಲಿಕೆ ಅಧಿಕಾರಿ ದೌರ್ಜನ್ಯ ಮೆರೆದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ತಮಗೆ ಮಾಮೂಲಿ ನೀಡಲಿಲ್ಲ ಎಂದು ಪಾಲಿಕೆ ಅಧಿಕಾರಿ ಬಾಲಕನ ಮೊಟ್ಟೆ ಗಾಡಿಯನ್ನು ಪಲ್ಟಿ ಮಾಡಿ ಪುಡಿ ಮಾಡಿದ್ದಾರೆ.

ಬಾಲಕ ವ್ಯಾಪಾರ ಮಾಡಲು ತಳ್ಳುಗಾಡಿಯಲ್ಲಿ ಮೊಟ್ಟೆಯ ಟ್ರೇಗಳನ್ನು ತುಂಬಿ ತಳ್ಳಿಕೊಂಡು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿ 100ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇಲ್ಲವಾದಲ್ಲಿ ತಳ್ಳುಗಾಡಿಯನ್ನು ಸ್ಥಳಾಂತರ ಮಾಡುವಂತೆ ಆದೇಶಿಸಿದ್ದಾನೆ.

ಬಾಲಕ ಈ ಸಂದರ್ಭದಲ್ಲಿ ವ್ಯಾಪಾರ ಆಗಿಲ್ಲ ಎಂದು ಹಣ ಕೊಡಲು ನಿರಾಕರಿಸಿದ್ದು, ಕೋಪಗೊಂಡ ಅಧಿಕಾರಿ ಬಾಲಕನ ತಳ್ಳುಗಾಡಿಯನ್ನು ಪಲ್ಟಿ ಮಾಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲೇ ಸಾಲ‌ಮಾಡಿ ಮೊಟ್ಟೆ ತಂದು ಮಾರುತ್ತಿದ್ದ ಬಾಲಕ, ಇದೀಗ ಅಧಿಕಾರಿಯ ದರ್ಪದಿಂದ ಎಲ್ಲಾ ಮೊಟ್ಟೆಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದ. ಆದರೆ ವೀಡಿಯೋ ವೈರಲ್ ಆಗುತ್ತಿದ್ದಂತೆ ಇಂದೋರ್‌ನ ಸ್ಥಳೀಯ ಸ್ವಯಂಸೇವಕ ಸಂಘಟನೆಗಳು ಬಾಲಕನಿಗೆ ವ್ಯಾಪಾರಕ್ಕೆ ಹಣಕಾಸಿನ ನೆರವು ನೀಡಿದ್ದಾರೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!