ಜಲಪಾತದಲ್ಲಿ ಈಜಲು ಹೋದ ತಂದೆ, ಮಗ ನೀರಿನಲ್ಲಿ ಕೊಚ್ಚಿಹೋದ ಘಟನೆ ರಾಯಚೂರು ಜಿಲ್ಲೆಯ ಹಟ್ಟಿ ಸಮೀಪದ ಗುಂಡ್ಲಬಂಡಾ ಜಲಪಾತದಲ್ಲಿ ನಡೆದಿದೆ. ಮಳೆಯಿಂದಾಗಿ ಜಲಪಾತ ತುಂಬಿ ಹರಿಯುತ್ತಿದ್ದು, ಇದನ್ನು ವೀಕ್ಷಿಸಲು ನಾಲ್ಕು ಜನ ತೆರಳಿದ್ದರು.
ಜಲಪಾತ ವೀಕ್ಷಣೆಗೆ ತೆರಳಿದವರು ಅದರಲ್ಲಿ ಈಜಲು ನೀರಿಗೆ ಇಳಿದಿದ್ದು, ಈ ಸಂದರ್ಭದಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಳವಾಗಿದೆ. ನೀರಿನ ಹರಿವು ಹೆಚ್ಚಳವಾಗಿದ್ದನ್ನು ಗಮನಿಸಿದ ಒಬ್ಬಾತ ಈಜಿ ದಡ ಸೇರಿದರೆ ಇನ್ನೊಬ್ಬ ನದಿ ಮಧ್ಯದಲ್ಲಿದ್ದ ಬಂಡೆ ಏರಿ ಕೂತಿದ್ದಾನೆ.
ಆದರೆ ನೀರಿನ ರಭಸಕ್ಕೆ ಉಳಿದ ಇಬ್ಬರು ಈಜಲಾಗದೆ ನೀರುಪಾಲಾಗಿದ್ದಾರೆ. ಮೃತರನ್ನು 35 ವರ್ಷದ ಕೃಷ್ಣಪ್ಪ ಮತ್ತು ಅವರ 5 ವರ್ಷದ ಧನುಷ್ ಎಂದು ಗುರುತಿಸಲಾಗಿದೆ. ಬಂಡೆ ಮೇಲೆ ಕುಳಿತ ವ್ಯಕ್ತಿಯನ್ನು ಪೋಲೀಸರು ರಕ್ಷಿಸಿದ್ದಾರೆ.
ನೀರು ಪಾಲಾಗಿರುವ ತಂದೆ, ಮಗನ ಹುಡುಕಾಟ ಮುಂದುವರಿದಿದೆ. ಬಂಡೆಯ ಮೇಲೆ ಕೂತ ಯುವಕನನ್ನು ಪೋಲೀಸರು ಹಾಗೂ ಸ್ಥಳೀಯರು ಸೇರಿ ರಕ್ಷಣೆ ಮಾಡುತ್ತಿರುವ ವೀಡಿಯೋ ನೋಡಿ,