ರಸ್ತೆಯ ಮೇಲೆ ತನ್ನ ಪಾಡಿಗೆ ತಾನು ತೆರಳುತ್ತಿದ್ದ ಹುಲಿಗೆ ಹೆಬ್ಬಾವೊಂದು ಅಡ್ಡವಾಗಿ ಸಿಕ್ಕಿದ್ದು, ಹುಲಿಯು ಹೆಬ್ಬಾವಿಗೆ ಯಾವುದೇ ರೀತಿ ತೊಂದರೆ ಮಾಡದೆ ತಾನು ಸಾಗುವ ಪತವನ್ನು ಬದಲಿಸಿ ಸಾಗಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವದ ಅರಣ್ಯದಲ್ಲಿ ನಡೆದಿದೆ. ಈ ವೀಡಿಯೋ 2018ರ ಆಗಸ್ಟ್ನಲ್ಲಿ ಚಿತ್ರೀಕರಿಸಲಾಗಿದ್ದು, ಇದೀಗ ಸಖತ್ ವೈರಲ್ ಆಗಿದೆ.
ದಟ್ಟ ಕಾಡಿನ ಮಧ್ಯೆ ಹುಲಿ ನಡೆದುಕೊಂಡು ಹೋಗುತ್ತಿದ್ದಾಗ ಹೆಬ್ಬಾವೊಂದು ಅದೇ ದಾರಿಯಲ್ಲಿ ಹೆಬ್ಬಾವೊಂದು ತೆವಳಿಕೊಂಡು ರಸ್ತೆ ದಾಟುತ್ತಿತ್ತು. ಹುಲಿಯು ಹೆಬ್ಬಾವನ್ನು ನೋಡಿದ ತಕ್ಷಣ, ಅದಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದೆ ತಾನು ಸಾಗುತ್ತಿದ್ದ ದಾರಿಯನ್ನ ಬದಲಿಸಿ ಮುಂದೆ ಸಾಗಿದೆ. ಈ ವೀಡಿಯೋವನ್ನು ಪ್ರಾಣಿಪ್ರೇಮಿ ಶರತ್ ಅಬ್ರಹಾಂ ಅವರು 2018ರ ಆಗಸ್ಟ್ನಲ್ಲಿ ಚಿತ್ರೀಕರಿಸಿದ್ದಾರೆ.
ಇದೀಗ ಈ ವೀಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅನೇಕರು ಹುಲಿ ತೆಗೆದುಕೊಂಡ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ನಾವು ಮನುಷ್ಯರೂ ಇದರಿಂದ ಏನಾದರೂ ಕಲಿಯಬೇಕು ಎಂದು ಬರೆದಿದ್ದಾರೆ. ವೈರಲ್ ವೀಡಿಯೋ ನೋಡಿ,
Watch Video
Tiger leaves the way to Python.. pic.twitter.com/87nGHbo0M0
— Susanta Nanda IFS (@susantananda3) July 21, 2020