ಬೆಕ್ಕುಗಳು ಕದ್ದು ಹಾಲು ಕುಡಿಯೋದು, ಕದ್ದು ತಿನ್ನೋದು ಸಾಮಾನ್ಯವಾಗಿ ಕೇಳಿರ್ತೇವೆ. ಆದರೆ ಇಲ್ಲೊಂದು ಬೆಕ್ಕು ಹಣದ ಕಟ್ಟನ್ನು ಎಗರಿಸಿ ಬಾಯಿಯಲ್ಲಿ ಓಡಿಕೊಂಡು ಹೋಗಿದೆ.
ರಷ್ಯಾದ ಪಬ್ ಒಂದರಲ್ಲಿ ಈ ಘಟನೆ ನಡೆದಿದ್ದು, ಬಾರ್ ಕೌಂಟರ್ನಲ್ಲಿ ಮಾಲೀಕ ಇಲ್ಲದಿರೋದನ್ನ ಗಮನಿಸಿದ ಬೆಕ್ಕು ಹಣದ ಕಟ್ಟನ್ನು ಡ್ರಾವರ್ನಿಂದ ಎಗರಿಸಿ ಬಾಯಲ್ಲಿ ಹಿಡಿದುಕೊಂಡು ಓಡಿಹೋಗಲು ಯತ್ನಿಸಿದೆ. ಆದರೆ ಹಣದ ಕಟ್ಟು ಬೆಕ್ಕಿನ ಬಾಯಿಂದ ಜಾರಿ ಬಿದ್ದಿದ್ದು, ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಆ ಹಣದ ಕಟ್ಟು ಎತ್ತಿಕೊಂಡು ಪಬ್ ಮಾಲೀಕನಿಗೆ ಹಿಂದುರುಗಿಸಿದ್ದಾರೆ.
ಬಾರ್ ಮಾಲೀಕನ ಪ್ರಕಾರ ಇಂತಹ ಘಟನೆ ಹಿಂದೆಯೂ ನಡೆದಿದೆಯಂತೆ. ಈ ಹಿಂದೆಯೂ ಹಲವು ಬಾರಿ ಹಣ ಕದಿಯುವಾಗ ಬೆಕ್ಕು ಮಾಲೀಕರ ಕೈಗೆ ಸಿಕ್ಕಿಬಿದ್ದಿದೆ, ಬೆಕ್ಕಿನ ಕುಚೇಷ್ಟೆಯನ್ನು ಗಮನಿಸಬೇಕೆಂದೆ ಪಬ್ ಮಾಲೀಕ ಎಲ್ಲಾ ಕಡೆ ಸಿಸಿಟಿವಿ ಅಳವಡಿಸಿದ್ದಾನೆ.
ಯಾರೋ ಈ ಬೆಕ್ಕನ್ನು ಬಾಕ್ಸ್ ಪೆಟ್ಟಿಗೆಯಲ್ಲಿ ತುಂಬಿ ಪಬ್ ಮುಂಬಾಗ ಬಿಟ್ಟು ಹೋಗಿದ್ದರಂತೆ. ಅದನ್ನು ಗಮನಿಸಿದ ಪಬ್ ಮಾಲೀಕ ಬೆಕ್ಕನ್ನು ತಮ್ಮ ಜೊತೆಯೇ ಇಟ್ಟುಕೊಂಡು ಸಾಕುತ್ತಿದ್ದಾರೆ. ಆದರೆ ಬೆಕ್ಕು ಅನ್ನ ಹಾಕಿದವರಿಗೆ ಕನ್ನ ಹಾಕುವ ಕೆಲಸ ಮಾಡಿದೆ.
ಕೆಲವರ ಪ್ರಕಾರ ಈ ಬೆಕ್ಕಿನ ಹಿಂದಿನ ಮಾಲೀಕ ಈ ಬೆಕ್ಕಿಗೆ ಕಳ್ಳತನ ಮಾಡೋದು ಕಲಿಸಿರಬಹುದು, ಹಾಗಾಗಿ ಬೆಕ್ಕು ಕಳ್ಳತನಕ್ಕೆ ಇಳಿದಿದೆ ಎನ್ನಲಾಗುತ್ತಿದೆ. ಸಿಸಿಟಿವಿಯಲ್ಲಿ ಸೆರೆಯಾದ ವೈರಲ್ ವೀಡಿಯೋ ನೋಡಿ,