ಸೇಲ್ಸ್ಮೆನ್ ಸೋಗಿನಲ್ಲಿ ಬಂದು ಮಗುವನ್ನು ಅಪಹರಿಸಲು ಯತ್ನಿಸಿದ ಕಳ್ಳರ ವಿರುದ್ಧ ಹೋರಾಡಿ ತಾಯಿಯೊಬ್ಬಳು ತನ್ನ ಮಗುವನ್ನು ಕಾಪಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಸೇಲ್ಸ್ಮೆನ್ ರೀತಿ ಬಟ್ಟೆ ಧರಿಸಿ ಬೈಕಿನಲ್ಲಿ ಬಂದಿದ್ದ ಇಬ್ಬರು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸೋದನ್ನು ಗಮನಿಸಿದ ವೃದ್ಧರೊಬ್ಬರು ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆರೋಪಿಗಳು, ‘ನಾವು ಸೇಲ್ಸ್ಮೆನ್ಗಳು, ತುಂಬಾ ಬಾಯಾರಿಕೆ ಆಗಿದೆ ನೀರು ಕೊಂಡಿ’ ಎಂದಿದ್ದಾರೆ. ಅನುಮಾಗೊಂಡ ವೃದ್ಧ ಬಾಗಿಲು ತೆರೆದಿಲ್ಲ.
ನಂತರ ಆರೋಪಿಗಳು ನೇರವಾಗಿ ತಾವು ಅಪಹರಿಸಬೇಕೆಂದಿದ್ದ ಮಗುವಿನ ಮನೆಗೆ ತೆರಳಿದ್ದಾರೆ. ಮಗುವಿನ ತಾಯಿ ಮಗುವನ್ನು ಹಿಡಿದುಕೊಂಡು ಗೇಟ್ ಬಳಿ ನಿಂತಿದ್ದು, ತಾಯಿಯ ಬಳಿ ಬಾಯಾರಿಕೆ ಆಗಿದೆ ನೀರು ಕೊಡುವಂತೆ ಕೇಳಿದ್ದಾರೆ. ನೀರು ತರುವ ಉದ್ದೇಶದಿಂದ ಮಗುವನ್ನು ಅಂಗಳದಲ್ಲೇ ಬಿಟ್ಟ ತಾಯಿ ನೀರು ತರಲು ಮನೆಯೊಳಕ್ಕೆ ತೆರಳಿದ್ದಾರೆ.
ಸರಿಯಾದ ಸಮಯ ಸಿಕ್ಕಿದ್ದೇ ತಡ, ಕಳ್ಳರು ಮಗುವನ್ನು ಎತ್ತಿಕೊಂಡು ಬೈಕಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ತಾಯಿ ಓಡಿ ಬಂದು ಬೈಕ್ ನ ಮೇಲೆ ಜಿಗಿದಿದ್ದಾರೆ. ಬೈಕ್ ಬಿದ್ದಾಗ ಮಗುವನ್ನು ಕಳ್ಳನ ಕೈಯಿಂದ ಎತ್ತಿಕೊಂಡಿದ್ದಾರೆ.
ಬೈಕ್ ಬಿದ್ದ ಸದ್ದಿಗೆ ಸ್ಥಳೀಯರು ಓಡಿಬಂದಿದ್ದು, ಕಳ್ಳ ಬೈಕ್ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ರಸ್ತೆಯ ಎರಡೂ ಬದಿಗಳಲ್ಲಿ ತಮ್ಮ ಬೈಕ್ಗಳನ್ನು ಅಡ್ಡವಿಟ್ಟು ತಪ್ಪಿಸಿಕೊಳ್ಳದಂತೆ ತಡೆದಿದ್ದು, ಕಳ್ಳರು ಬೈಕ್ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಬೈಕ್ನ ಜಾಡು ಹಿಡಿದು ಪೋಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಮಗುವನ್ನು ಅಪಹರಿಸಲು ಯತ್ನಿಸಿದ್ದು ಮಗುವಿನ ಸ್ವಂತ ಚಿಕ್ಕಪ್ಪ ಉಪೇಂದ್ರ ಕುಮಾರ್ ಗುಪ್ತಾ (35), ಆತನ ಸ್ನೇಹಿತ ಧೀರಜ್ (34) ಎಂದು ತಿಳಿದುಬಂದಿದೆ. ಕೃತ್ಯಕ್ಕೆ ಬಳಸಲಾದ ಬೈಕ್ ಮಾಲೀಕನನ್ನು ಬಂಧಿಸಲಾಗಿದೆ.
ಮಗುವನ್ನು ಅಪಹರಣ ಮಾಡಿ 40 ಲಕ್ಷಕ್ಕೆ ಬೇಡಿಕೆ ಇಡಲು ಆರೋಪಿಗಳು ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಎಲ್ಲಾ ವೀಡಿಯೋ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಾಯಿ ಹಾಗೂ ಸ್ಥಳೀಯರ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ. ವೀಡಿಯೋ ನೋಡಿ,
Watch Video
#WATCH: Mother of a 4-yr-old girl saved her daughter from kidnappers in Shakarpur area on July 21. Two persons including uncle of the child arrested. A motorcycle with fake number plate, one loaded country-made pistol, .315 bore cartridge&original number plate were seized. #Delhi pic.twitter.com/nG6R14pUnp
— ANI (@ANI) July 22, 2020