fbpx

ನವಿಲಿನ ಜೊತೆ ಕಾಳಗಕ್ಕಿಳಿದ ಕೋಳಿ, ಗೆದ್ದಿದ್ಯಾರು ನೋಡಿ (ವೈರಲ್ ವೀಡಿಯೋ)

ಕರಾವಳಿ ಭಾಗದಲ್ಲಿ ಕೋಳಿ ಅಂಕ ಫೇಮಸ್, ಇದಕ್ಕಾಗಿಯೇ ಸಾವಿರಾರು ಬೆಲೆಯ ಹುಂಜ ಕೋಳಿಗಳನ್ನು ಸಾಕುತ್ತಾರೆ ಇಲ್ಲಿನ ಜನ. ಕೋಳಿ ಅಂಕಗಳು ನಿಷೇಧವಾಗಿದ್ರೂ, ಪೋಲೀಸರ ಕಣ್ತಪ್ಪಿಸಿ ಈಗಲೂ ಹಲವು ಕಡೆ ಅನಧಿಕೃತವಾಗಿ ಕೋಳಿ ಅಂಕಗಳನ್ನು ನಡೆಸಲಾಗುತ್ತೆ.

ಆದರೆ ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಅಂಕದ ಹುಂಜದ ಜೊತೆ ರಾಷ್ಟ್ರಪಕ್ಷಿ ನವಿಲು ಕಾದಾಡುತ್ತಿರುವ ವೀಡಿಯೋ ಇದಾಗಿದೆ. ನಡು ರಸ್ತೆಯಲ್ಲಿ ಹಲವು ನಿಮಿಷಗಳ ಕಾಲ ಈ ಕಾದಾಟ ನಡೆದಿದ್ದು, ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ವೀಡಿಯೋವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲು ಸೆರೆಹಿಡಿದಿದ್ದಾರೆ.

ಘಟನೆ ನಡೆದಿರೋದು ಉಡುಪಿಯಲ್ಲಿ, ಇದೀಗ ರಾಷ್ಟ್ರ ಪಕ್ಷಿ ನವಿಲು ಹಾಗೂ ಹುಂಜದ ಕಾಳಗದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!