fbpx

Please assign a menu to the primary menu location under menu

ಗಿರಿಧರ್ ಕಜೆಯವರ ಆಯುರ್ವೇದ ಔಷಧಿ ಸೇವಿಸಿ ಕರೋನಾ ಗೆದ್ದ ಸಿ.ಟಿ.ರವಿ, ಜನ ಸಾಮಾನ್ಯರಿಗೆ ಯಾಕಿಲ್ಲ ಆಯುರ್ವೇದ ಭಾಗ್ಯ?

ಕರೋನಾ ಸೋಂಕಿಗೆ ಒಳಗಾಗಿದ್ದ ಸಚಿವ ಸಿ.ಟಿ.ರವಿಯವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕರೋನಾ ಸೋಂಕು ತಗುಲಿದ ಕಾರಣ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದ ಸಿ‌.ಟಿ.ರವಿಯವರ ನಾಲ್ಕನೇ ಕೋವಿಡ್ ಟೆಸ್ಟ್ ವರದಿ ಇದೀಗ ನೆಗೆಟಿವ್ ಬಂದಿದೆ.

ಎರಡು ವಾರಗಳ ಹಿಂದೆ ಸಿ.ಟಿ‌ರವಿಯವರು ಎರಡು ಬಾರಿ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದರು. ಇದರಲ್ಲಿ ಮೊದಲ ವರದಿ ನೆಗೆಟಿವ್ ಬಂದಿದ್ದರೆ, ಎರಡನೇ ಟೆಸ್ಟ್ ವರದಿ ಪಾಸಿಟಿವ್ ಬಂದಿತ್ತು. ಈ ಸಂಬಂಧ ಸಚಿವರು ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದರು.

ಜೂ.11 ರಂದು ಮೂರನೇ ಟೆಸ್ಟ್ ಮಾಡಿಸಿದ್ದು, ಇದರಲ್ಲಿ ಸಿ.ಟಿ.ರವಿ ಪತ್ನಿ, ಗನ್ ಮ್ಯಾನ್ ಹಾಗೂ ಕಾರು ಚಾಲಕನಿಗೆ ನೆಗೆಟಿವ್ ಬಂದಿದ್ದರೆ, ಸಿ.ಟಿ‌.ರವಿಯವರಿಗೆ ಮತ್ತೆ ಪಾಸಿಟಿವ್ ಬಂದಿತ್ತು.

ಈ ಸಂಬಂಧ ಡಾ. ಗಿರಿಧರ್ ಕಜೆ ಅವರು ಕೊಟ್ಟಿದ್ದ ಆಯುರ್ವೇದ ಔಷಧವನ್ನ ಸೇವಿಸುತ್ತಿದ್ದ ಸಿ.ಟಿ. ರವಿಯವರು ಇದೀಗ ಕರೊನಾ ಸೋಂಕಿನಿಂದ ಗುಣವಾಗಿದ್ದಾರೆ.

ಆದರೆ ಕಜೆಯವರ ಆಯುರ್ವೇದ ಔಷದಿ ಜನಸಾಮಾನ್ಯರಿಗೆ ಇನ್ನೂ ಅಲಭ್ಯವಾಗಿರೋದರಿಂದ ಜನರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದರ ಹಿಂದೆ ದೊಡ್ಡ ಔಷಧಿ ಕಂಪನಿಗಳ ಲಾಭಿ ಇದೆ, ಹೀಗಾಗಿ ಕಜೆಯವರ ಕರೋನಾ ಔಷಧಿ ಜನ ಸಾಮಾನ್ಯರಿಗೆ ಸಿಗದಂತೆ ತಡೆಹಿಡಿಯಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

Watch Video

error: Content is protected !!