fbpx

ನ್ಯೂಸ್ ಓದುತ್ತಿರುವಾಗಲೇ ಉದುರಿದ ಹಲ್ಲು, ಸುದ್ದಿ ನಿರೂಪಕಿ ಮಾಡಿದ್ದೇನು ನೋಡಿ. ವೈರಲ್ ವೀಡಿಯೋ

ನ್ಯೂಸ್ ಓದುತ್ತಿರೋವಾಗಲೇ ಸುದ್ದಿ ನಿರೂಪಕಿಯ ಹಲ್ಲು ಉದುರಿದ ಘಟನೆ ಉಕ್ರೇನ್‌ನಲ್ಲಿ ನಡೆದಿದೆ. ನಿರೂಪಕಿ ಸುದ್ದಿ ಓದುತ್ತಿರುವ ಮಧ್ಯದಲ್ಲಿಯೇ ಆಕೆಯ ಹಲ್ಲು ಉದುರಿಬಿದ್ದಿರುವ ವೀಡಿಯೋ ವೈರಲ್ ಆಗಿದ್ದು, ಆದರೆ ಸ್ವಲ್ಪವೂ ವಿಚಲಿತಳಾಗದ ಆ್ಯಂಕರ್ ಉದುರಿದ ಹಲ್ಲನ್ನು ಕೈಗೆ ತೆಗದುಕೊಂಡು ಸುದ್ದಿ ಓದುವುದನ್ನು ಮುಂದುವರಿಸಿದ್ದಾಳೆ.

ಟ್ರೋಲ್‌ಗೆ ಒಳಗಾಗುವ ಸಂದರ್ಭವನ್ನು ಸರಿಯಾಗಿ ನಿಭಾಯಿಸಿರುವ ಆ್ಯಂಕರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವೀಡಿಯೋವನ್ನು ಆ್ಯಂಕರ್ ಮರಿಚ್ಕಾ ಪಡಲ್ಕೊ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ನಡೆದ ಘಟನೆ ಬಗ್ಗೆ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ತನ್ನ ಮಗಳು 10 ವರ್ಷಗಳ ಹಿಂದೆ ಮೆಟಲ್‌ ಅಲರಾಂ ಗಡಿಯಾರದ ಜೊತೆ ಆಡುವಾಗ ಅದರಿಂದ ನನ್ನ ಹಲ್ಲಿಗೆ ಬಡಿದಿದ್ದಳು. ಅದರ ಪರಿಣಾಮ ಹಲ್ಲು ಲೂಸ್ ಆದಂತಹ ಸ್ಥಿತಿಯಲ್ಲಿತ್ತು ಎಂದಿದ್ದಾರೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!