fbpx

Please assign a menu to the primary menu location under menu

ಚರ್ಚ್‌ನಲ್ಲಿದ್ದ ಏಸುಪ್ರತಿಮೆ, ಶಿಲುಬೆಗಳನ್ನು ಧ್ವಂಸ ಮಾಡಿ ತಿಪ್ಪೆಗೆಸೆದು, ಕಮ್ಯುನಿಸ್ಟ್ ನಾಯಕರ ಫೋಟೋ ನೇತುಹಾಕಿದ ಚೀನಾ (ವೀಡಿಯೋ)

ಕಮ್ಯುನಿಸ್ಟ್ ಭ’ಯೋತ್ಪಾದಕ ರಾಷ್ಟ್ರ ಚೀನಾ ತನ್ನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಮುಸ್ಲಿಮರ ನಂತರ ಇದೀಗ ಕ್ರಿಶ್ಚಿಯನ್ ಧರ್ಮದ ವಿರುದ್ಧ ಕಮ್ಯುನಿಷ್ಟ್ ಸರ್ಕಾರದ ಕಣ್ಣು ಬಿದ್ದಿದೆ.

ಮಾಧ್ಯಮ ವರದಿ ಪ್ರಕಾರ, ಚೀನಾ ಸರ್ಕಾರ ಇದೀಗ ತನ್ನ ದೇಶದಲ್ಲಿರುವ ಕ್ರಿಶ್ಚಿಯನ್ ಸಮುದಾಯಕ್ಕೆ ಆದೇಶ ಹೊರಡಿಸಿದ್ದು, ತಮ್ಮ ಮನೆಯಲ್ಲಿರುವ ಶಿಲುಬೆಯನ್ನು ಪುಡಿಗೈದು, ಏಸುವಿನ ಪ್ರತಿಮೆಯನ್ನು ತೆರವುಗೊಳಿಸಿ, ಆ ಜಾಗದಲ್ಲಿ ಕಮ್ಯುನಿಸ್ಟ್ ನಾಯಕರ ಫೋಟೋಗಳನ್ನು ಹಾಕುವಂತೆ ಹೇಳಲಾಗಿದೆ.

ಚೀನಾದ ಕೆಲ ನಗರಗಳಲ್ಲಿ ಚೈನೀಸ್ ಅಧಿಕಾರಿಗಳೆ ಚರ್ಚ್‌ಗಳಿಗೆ ನುಗ್ಗಿ ಅಲ್ಲಿದ್ದ ಏಸುವಿನ ಪ್ರತಿಮೆ ಹಾಗೂ ಶಿಲುಭೆಗಳನ್ನು ಧ್ವಂಸ ಮಾಡಿದ್ದಾರೆ. ಅನ್ಹುಯಿ, ಜಿಯಾಂಗ್ಸು, ಹೆಬೈ ಮತ್ತು ಝೆಜಿಯಾಂಗ್ ನಗರಗಳಲ್ಲಿ ಇರೋ ಚರ್ಚ್‌ಗಳನ್ನು ಅದಾಗಲೆ ಚೀನಾದ ಕಮ್ಯುನಿಸ್ಟ್ ಅಧಿಕಾರಿಗಳು ಧ್ವಂಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಧಾರ್ಮಿಕ ಹಾಗೂ ಮಾನವ ಹಕ್ಕುಗಳನ್ನು ಚೀನಾ ಸರ್ಕಾರ ಬಲವಂತವಾಗಿ ಕಸಿದುಕೊಳ್ಳುತ್ತಿದೆ ಎಂದು ಅನೇಕ ಜನ ಆರೋಪಿಸಿದ್ದಾರೆ. ಚೀನಾದ ಬಡಜನರು ವಾಸಿಸುವ ಪ್ರಾಂತ್ಯಗಳಲ್ಲಿ ಈ ಘಟನೆ ಹೆಚ್ಚಾಗಿ ನಡೆಯುತ್ತಿದ್ದು, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಯಸುವ ಜನರು ತಮ್ಮ ಮನೆಗಳಿಂದ ಧಾರ್ಮಿಕ ಚಿಹ್ನೆಗಳನ್ನು ತೆರವುಗೊಳಿಸಿ, ಆ ಜಾಗದಲ್ಲಿ ಚೀನೀ ಕಮ್ಯುನಿಸ್ಟ್ ನಾಯಕರು ಹಾಗೂ ಪ್ರಧಾನಿ ಕ್ಸಿ ಜಿನ್‌ಪಿಂಗ್ ನ ಫೋಟೋ ಹಾಕುವಂತೆ ಆದೇಶಿಸಿದೆ.

ಚೀನೀ ಸರ್ಕಾರ ಕಳೆದ ಕೆಲ ವರ್ಷಗಳಿಂದಲೇ ಚೀನಾದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊಸಕಿ ಹಾಕುವ ಕೆಲಸ ಕೈಗೊಂಡಿದೆ. ಮೂಲ ಧಾರ್ಮಿಕ ಪುಸ್ತಕಗಳಲ್ಲಿ ತಮ್ಮ ಸರ್ಕಾರದ ಅವಶ್ಯಕತೆಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲು ಚೀನೀ ಸರ್ಕಾರ ಎರಡು ವರ್ಷಗಳ ಹಿಂದೆಯೇ ಆದೇಶಿಸಿತ್ತು.

ಭಾರತದಲ್ಲಿ ಇದೇ ಕ್ರಿಶ್ಚಿಯನ್ ಮಿಷನರಿಗಳು ಕಮ್ಯುನಿಸ್ಟರ ಸಹಾಯದಿಂದ ಬಡ ಹಿಂದೂಗಳನ್ನು ಹಣದ ಆಮಿಷವೊಡ್ಡಿ ಮತಾಂತರ ಮಾಡುತ್ತಿದೆ. ಆದರೆ ಚೀನಾದಲ್ಲಿರುವ ತಮ್ಮ ಮೂಲ ಕ್ರಿಶ್ಚಿಯನ್ನರನ್ನು ಉಳಿಸಿಕೊಳ್ಳುವ ತಾಕತ್ತು ಮಿಷನರಿಗಳಿಗೆ ಇಲ್ಲ.

Watch Video

error: Content is protected !!