ತನ್ನ ಕುಟುಂಬದ ಮೇಲೆ ದಾಳಿ ಮಾಡಿದ ಇಸ್ಲಾ’ಮಿಕ್ ತಾಲೀಬಾನ್ ಉಗ್ರರನ್ನು ಪುಟ್ಟ ಬಾಲಕಿಯೊಬ್ಬಳು ಗುಂಡಿಟ್ಟು ಹತ್ಯೆ ಮಾಡಿದ್ದಾಳೆ. ಘಟನೆ ನಡೆದಿರೋದು ಅಫ್ಘಾನಿಸ್ತಾನದಲ್ಲಿ, ಬಾಲಕಿಯ ತಂದೆ ಸರ್ಕಾರದ ಪರ ಕೆಲಸ ಮಾಡುತ್ತಿದ್ದುದೇ ತಾಲೀಬಾನ್ ಉಗ್ರರು ದಾಳಿ ಮಾಡಲು ಕಾರಣ.
ಬಾಲಕಿಯ ಮನೆಗೆ ದಾಳಿ ಮಾಡಿದ ತಾಲೀಬಾನ್ ಉಗ್ರರು ಮನಬಂದಂತೆ ಗುಂಡುಹಾರಿಸಿ ಆಕೆಯ ತಂದೆ ಹಾಗೂ ತಾಯಿಯನ್ನು ಹತ್ಯೆ ಮಾಡಿದ್ದಾರೆ. ತಕ್ಷಣ ಮನೆಯಲ್ಲಿದ್ದ AK47 ಗನ್ ಎತ್ತಿಕೊಂಡ ಬಾಲಕಿ ತಾಲೀಬಾನ್ ಉಗ್ರರ ಮೇಲೆ ಮರು ದಾಳಿ ನಡೆಸಿದ್ದು ಇಬ್ಬರು ಉಗ್ರರು ಸ್ಥಳದಲ್ಲೇ ಹತರಾಗಿದ್ದಾರೆ.
ಘಟನೆಯಲ್ಲಿ ಹಲವು ಉಗ್ರರು ಗಾಯಗೊಂಡಿದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. ಬಾಲಕಿಯ ಮೇಲೆ ಸೇಡು ತೀರಿಸಿಕೊಳ್ಳಲು ಮರು ದಾಳಿ ಮಾಡಲು ಬಂದ ಉಗ್ರರನ್ನು ಸ್ಥಳೀಯರು ಹಾಗೂ ಸರ್ಕಾರಿ ಸೈನಿಕರು ಹೊಡೆದೋಡಿಸಿದ್ದಾರೆ.
ವೀರ ಬಾಲಕಿಯ ವಯಸ್ಸು 14-16 ಇರಬಹುದು ಎಂದು ತಿಳಿದುಬಂದಿದೆ. ಇದೀಗ ಹೆತ್ತವರನ್ನು ಕಳೆದುಕೊಂಡ ಬಾಲಕಿ ಮತ್ತು ಆಕೆಯ ಸಹೋದರನನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.