fbpx

ನೋಡನೋಡುತ್ತಿದ್ದಂತೆ ಕಾವೇರಿಗೆ ಕೈಮುಗಿದು ನದಿಗೆ ಜಿಗಿದ ಮಹಿಳೆ, ಬೆಚ್ಚಿಬೀಳಿಸೋ ವೀಡಿಯೋ ವೈರಲ್

ಕೊಡಗು ಜಿಲ್ಲೆಯ ಮಡಿಕೇರಿಯ ಮೂರ್ನಾಡು ಎಂಬಲ್ಲಿ ಮಹಿಳೆಯೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಸೋಮವಾರ ಅಂಜೆ ಮೂರ್ನಾಡಿನ ಬಲಮುರಿ ಬಳಿಯ ಸೇತುವೆಯಿಂದ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

ಸೇತುವೆಯ ಮೇಲೆ ನಿಂತ ಮಹಿಳೆ ಸುಮಾರು 20ಸೆಕೆಂಡ್‌ಗಳ ಕಾಲ ನದಿಗೆ ಕೈಮುಗಿದು ನಿಂತು ನಂತರ ಸೇತುವೆಯಿಂದ ಸ್ವಲ್ಪ ಕೆಳಗೆ ಇಳಿದು ಅಲ್ಲಿಂದ ನದಿಗೆ ಹಾರಿದ್ದಾರೆ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮೂರ್ನಾಡಿನ ನಿವಾಸಿ ಮುನಿಯಮ್ಮ ಎಂದು ಗುರುತಿಸಲಾಗಿದೆ.


Continue Reading

ಮಹಿಳೆ ನದಿಗೆ ಹಾರುತ್ತಿದ್ದಂತೆ ಅಲ್ಲೇ ಬಲಮುರಿ ದೇವಾಲಯದ ಸಮೀಪದಲ್ಲೇ ಇದ್ದ ಸ್ಥಳೀಯರಾದ ಸೂರಜ್ ಮತ್ತು ಕಿರಣ್ ಎಂಬುವರು ರಕ್ಷಣೆಗೆ ಧಾವಿಸಿದ್ದಾರೆ. ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದಂತೆ ನದಿ ದಡದಲ್ಲಿ ಒಂದು ಕಿ.ಮೀ. ವರೆಗೂ ಯುವಕರು ಓಡಿದ್ದಾರೆ.

ಇದನ್ನೂ ಓದಿ:  ಪ್ರಧಾನಿ ಮೋದಿಯನ್ನೇ ಮೋಡಿ ಮಾಡಿದ ಕರಾವಳಿ ಯುವಕನ ವಿಶಿಷ್ಟ ಕಲೆ! ವೈರಲ್ ವಿಡಿಯೋ ನೋಡಿ

ಯುವಕರು ಕೊನೆಗೂ ಹಗ್ಗದ ಸಹಾಯದಿಂದ ಮುನಿಯಮ್ಮಳನ್ನು ರಕ್ಷಿಸಿದ್ದು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕೂಲಿ ಕೆಲಸ ಮಾಡುವ ಮುನಿಯಮ್ಮ ಗಂಡ ಮತ್ತು ಮಗನೊಂದಿಗೆ ವಾಸವಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ತನ್ನ ತಾಯಿ ಮದ್ಯದ ಅಮಲಿನಲ್ಲಿ ನದಿಗೆ ಹಾರಿದ್ದಾರೆಂದು ಆಕೆಯ ಪುತ್ರ ಹೇಳಿದ್ದಾನೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Watch Video

Trending Short Videos


close

This will close in 26 seconds

error: Content is protected !!