fbpx

ಭಾರತದ ಪ್ರವಾಹಕ್ಕೆ ಬಾಂಗ್ಲಾದೇಶದ ಪೋಟೋ ಬಳಸಿ ಟ್ರೋಲ್ ಆದ ಪ್ರಿಯಾಂಕ ಗಾಂಧಿ, ಇಲ್ಲಿದೆ ನೋಡಿ ಡಿಟೈಲ್

ಉತ್ತರ ಭಾರತದಾದ್ಯಂತ ಭಾರೀ ಮಳೆಯಿಂದಾಗ ಅಸ್ಸಾಂ, ಬಿಹಾರ ಹಾಗೂ ಉತ್ತರ ಪ್ರದೇಶದ ಹಲವು ಭಾಗಗಳು ಜಲಾವೃತವಾಗಿದೆ. ಮನೆಮಠಗಳು ಜಲಾವೃತವಾಗಿದ್ದು ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಸಂತ್ರಸ್ಥರ ನೆರವಿಗೆ ನಿಲ್ಲಬೇಕು ಎಂದು ಟ್ಟಿಟ್ಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ


Continue Reading

ಈ ಬಗ್ಗೆ ಎರಡು ಪೋಟೋಗಳನ್ನು ಪ್ರಕಟಿಸಿರುವ ಪ್ರಿಯಾಂಕ ಗಾಂಧಿ ಇದೀಗ ಟ್ರೋಲ್‌ಗೆ ಒಳಗಾಗಿದ್ದಾರೆ. ಎಲ್ಲಿಯೋ ನಡೆದಿರುವ ಪ್ರವಾಹದ ಪೋಟೋಗಳನ್ನು ಬಿಹಾರ, ಅಸ್ಸಾಂ ಹಾಗೂ ಉತ್ತರ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳ ಚಿತ್ರಣ ಎಂದಿರುವ ಅವರು, ತಾವು ಇದಕ್ಕೆ ಸಹಾಯ ಮಾಡುವುದಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  ಎರಡು ಮರದ ದಿಣ್ಣೆಗಳ ಮೇಲೆ ಕಾರು ಚಲಾಯಿಸುವ ಸಾಹಸಕ್ಕೆ ಕೈ ಹಾಕಿದ! ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಈ ಪೋಟೋಗಳು ನಕಲಿ ಎಂದು ತಿಳಿಯುತ್ತಿದ್ದಂತೆ ಟ್ರೋಲಿಗರು ಪ್ರಿಯಾಂಕಾ ಕಾಲೆಳೆಯಲು ಶುರು ಮಾಡಿದ್ದಾರೆ. ಸಹಾಯಹಸ್ತ ಚಾಚುವುದಾಗಿ ಹೇಳುತ್ತಿರುವ ಪ್ರಿಯಾಂಕಾ ಅವರು, ಯಾವ ಪ್ರವಾಹಪೀಡಿತರಿಗೆ ನೆರವಾಗುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Watch Video

Trending Short Videos

close

This will close in 26 seconds

error: Content is protected !!