fbpx

ಕರೋನಾ ಗೆದ್ದು ಬಂದ ಸಹೋದರಿಯನ್ನು ಡ್ಯಾನ್ಸ್ ಮಾಡುತ್ತಾ ಭರ್ಜರಿಯಾಗಿ ಸ್ವಾಗತಿಸಿದ ಯುವತಿ, ವೀಡಿಯೋ ವೈರಲ್

ಕೊರೊನಾ ವೈರಸ್‌ನಿಂದ ಗುಣಮುಖರಾಗಿ ಬರುವವರ ಮೇಲೆ ಹೂಮಳೆ ಸುರಿಸಿ ಸ್ವಾಗತಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಯುವತಿಯೊಬ್ಬಳು ಕೊರೋನಾ ವೈರಸ್ ಗೆದ್ದು ಬಂದ ತನ್ನ ಸಹೋದರಿಯನ್ನು ವಿಭಿನ್ನವಾಗಿ ಸ್ವಾಗತಿಸುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೋದಲ್ಲಿರುವ ಯುವತಿಯನ್ನು ಸಲೋನಿ ಎಂದು ಗುರುತಿಸಲಾಗಿದ್ದು, ಆಕೆಯನ್ನು ಹೊರತುಪಡಿಸಿ ಆಕೆಯ ಕುಟುಂಬದ ಎಲ್ಲಾ ಸದಸ್ಯರಿಗೆ ಕೊರೋನಾ ವೈರಸ್ ಆಕ್ರಮಿಸಿಕೊಂಡಿತ್ತು. ಸಲೋನಿಯ ತಂದೆ, ತಾಯಿ ಸೇರಿ ನಾಲ್ವರಿಗೆ ಕರೋನಾ ವೈರಸ್ ದೃಢಪಟ್ಟಿತ್ತು, ಇದರಲ್ಲಿ ಮೂವರು ಅದಾಗಲೇ ಸೋಂಕಿನಿಂದ ಗುಣಮುಖರಾಗಿ ಹೊರಬಂದಿದ್ದಾರೆ.

ಇದೀಗ ಆಕೆಯ ಸಹೋದರಿ ಕೂಡ ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದಾಗ. ಈ ವೇಳೆ ಸಲೋನಿ ಸಖತ್ ಸ್ಟೆಪ್ಸ್ ಹಾಕಿ ಸ್ವಾಗತಿಸಿದ್ದಾರೆ. ಈ ವೇಳೆ ಗುಣಮುಖರಾದವರು ಕೂಡ ಸಲೋನಿಗೆ ಸಾಥ್ ನೀಡಿದ್ದು, ಇಬ್ಬರೂ ಸಖತ್ತಾಗಿ ಡ್ಯಾನ್ಸ್ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

Watch Video

error: Content is protected !!