fbpx

ರಾಷ್ಟ್ರ ರಾಜಧಾನಿಯಲ್ಲಿ ವರುಣನ ಆರ್ಭಟಕ್ಕೆ ನೋಡನೋಡುತ್ತಿದ್ದಂತೆಯೇ ಕೊಚ್ಚಿಕೊಂಡು ಹೋಯಿತು ಮನೆ, ವೀಡಿಯೋ ವೈರಲ್

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕೆಲವು ಕಡೆ ಭೂಕುಸಿತಗಳು ಸಂಭವಿಸಿದೆ. ಮಳೆಯ ರಭಸಕ್ಕೆ ರಸ್ತೆಯ ತುಂಬೆಲ್ಲ ನೀರುನಿಂತು ನದಿಯಂತಾಗಿದ್ದು, ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ದೆಹಲಿ ಹಾಗೂ ಸುತ್ತಮುತ್ತ ಭಾರೀ ಮಳೆ ಮತ್ತು ಮೋಡ ಮುಸುಕಿನ ವಾತಾವರಣವಿದ್ದು, ತಾಪಮಾನ ಕುಸಿದಿದೆ. ಇಂದು ಬೆಳಗ್ಗೆ 5.30ರವೆಗೆ ದೆಹಲಿಯಲ್ಲಿ 4.9 ಮಿಲಿ ಮೀಟರ್ ಮಳೆಯಾಗಿದೆ. ವಾಯುವ್ಯ ಭಾರತದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೆಹಲಿಯ ಅನ್ನನಗರ್ ಸ್ಲಂ ಏರಿಯಾದಲ್ಲಿ ಮಳೆಯ ರಭಸಕ್ಕೆ ಮನೆಯೊಂದು ಕುಸಿದು ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವರುಣನ ರೌದ್ರಾವತಾರ ಬೆಚ್ಚಿಬೀಳಿಸುವಂತಿದೆ. ವೀಡಿಯೋ ನೋಡಿ,

Watch Video

error: Content is protected !!