ಇಲಿಯೊಂದು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ತನ್ನ ಮರಿಗಳನ್ನು ತನ್ನ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಳೆಯಾಗೋ ಬಗ್ಗೆ ಅರಿವಿಲ್ಲ ಇಲಿ ಚರಂಡಿಯ ಒಳಗೆ ಮರಿಗಳಿಗೆ ಜನ್ಮನೀಡಿತ್ತು. ಆದರೆ ಏಕಾಏಕಿ ಸುರಿದ ಮಳೆಗೆ ಚರಂಡಿ ನೀರು ತುಂಬಿ ಇಲಿಯ ಮರಿಗಳು ನೀರಿನಲ್ಲಿ ಕೊಚ್ಚಿಹೋಗೋದಿತ್ತು.
ತಕ್ಷಣ ತಾಯಿ ಇಲಿ ತನ್ನ ಪ್ರಾಣದ ಬಗ್ಗೆ ಲೆಕ್ಕಿಸದೆ ಮಳೆಯ ರಬಸದ ಮಧ್ಯೆಯೂ ಚರಂಡಿಯೊಳಗೆ ಹೋಗಿ ತನ್ನ ಮರಿಗಳನ್ನು ರಕ್ಷಿಸಿ ಹೊರತಂದಿದೆ. ಈ ವೀಡಿಯೋವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಚಿತ್ರಿಸಿದ್ದು, ವೈರಲ್ ಆಗಿದೆ.