fbpx

‘ಆಹಾರ’ ಅರಸಿ ಮನೆಯೊಳಕ್ಕೆ ನುಗ್ಗಿದ ‘ಚಿರತೆ’ ಮಾಡಿದ್ದೇನು ಗೊತ್ತೇ? ವೈರಲ್ ವೀಡಿಯೋ ನೋಡಿ

ಅರಣ್ಯನಾಶದಿಂದಾಗಿ ವನ್ಯಜೀವಿಗಳು ನಾಡಿನೊಳಕ್ಕೆ ಪ್ರವೇಶಿಸೋದು ಸಾಮಾನ್ಯವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶವಾಗಿದ್ದು, ಕಾಡಿನಲ್ಲಿ ಸ್ವಚ್ಚಂದವಾಗಿ ವಾಸಿಸುತ್ತಿದ್ದ ವನ್ಯಜೀವಿಗಳು ಆಹಾರ ಅರಸಿಕೊಂಡು ಜನವಸತಿ ಪ್ರದೇಶಗಳ ಮೇಲೆ ಲಗ್ಗೆಯಿಡುತ್ತಿದೆ.

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದು ಮನೆಯೊಂದಕ್ಕೆ ಲಗ್ಗೆಇಟ್ಟು ಸಾಕುನಾಯಿಯನ್ನು ಹೊತ್ತೊಯ್ದಿದೆ. ಉತ್ತರಖಂಡ್ ರಾಜ್ಯದ ತಲ್ಲಿತಲ್ ಎಂಬಲ್ಲಿ ಈ ಘಟನೆ ನಡೆದಿದ್ದು, ಚಿರತೆ ಬಂದಿದ್ದನ್ನು ಗಮನಿಸಿದ ಸಾಕುನಾಯಿ ಅದನ್ನು ಓಡಿಸಲು ಬೆನ್ನಟ್ಟಿದ್ದು, ಆದರೆ ಕೊನೆಗೆ ಚಿರತೆಗೆ ಆಹಾರವಾಗಿ ಹೋಗಿದೆ.

ಸಿಸಿಟಿವಿಯಲ್ಲಿ ಈ ದೃಷ್ಯ ಸೆರೆಯಾಗಿದ್ದು, ಚಿರತೆಯನ್ನು ಬೆನ್ನಟ್ಟಲು ಹೋದ ಸಾಕು ನಾಯಿಯ ಮೇಲೆ ಚಿರತೆ ಮರಳಿ ದಾಳಿ ಮಾಡಿದ್ದು, ಚಿರತೆಯಿಂದ ಜೀವ ಕಾಪಾಡಿಕೊಳ್ಳಲು ನಾಯಿ ಮನೆಯೊಳಕ್ಕೆ ಪ್ರವೇಶಿಸಲು ಯತ್ನಿಸಿದೆ. ಆದರೆ ಅಲ್ಲಿಗೂ ಹಿಂಬಾಲಿಸಿದ ಚಿರತೆ ನಾಯಿಯನ್ನು ಕುತ್ತಿಗೆಯಲ್ಲಿ ಹಿಡಿದು ಎಳೆದೊಯ್ದಿದೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!