fbpx

ತನ್ನದೆಂದು ‘ಬಿಟಿವಿ’ಯಲ್ಲಿ ಪ್ರತಾಪ ತೋರಿಸಿದ ಡ್ರೋನ್ ಯಾವ ಕಂಪನಿಯದ್ದು ಗೊತ್ತಾ? ಆ ಕಂಪನಿ ಪ್ರತಾಪನ ಬಗ್ಗೆ ಏನು ಹೇಳಿದೆ ನೋಡಿ

600 ‘ಡ್ರೋನ್’ ತಯಾರಿಸಿ ಹಾರಿಸಿದ್ದೇನೆ ಎಂದು ಕನ್ನಡಿಗರನ್ನು ವಂಚಿಸಿ ‘ಕಾಗೆ’ ಹಾರಿಸಿದ ಸೋಕಾಲ್ಡ್ ‘ಡ್ರೋನ್ ಬಾಯ್’ ಪ್ರತಾಪನ ಮುಖವಾಡ ಇದೀಗ ಮತ್ತೆ ಬಯಲಾಗಿದೆ. ಖಾಸಗಿ ಕನ್ನಡ ಸುದ್ದಿ ವಾಹಿನಿ ‘ಬಿ-ಟಿವಿ’ ಯಲ್ಲಿ ನೇರಪ್ರಸಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ ‘ಪ್ರತಾಪ’ ತೋರಿಸಿದ ಬಹುತೇಕ ಎಲ್ಲಾ ‘ಸಾಕ್ಷಿಗಳು’ ಇದೀಗ ನಕಲಿ ಎಂಬ ಸಂಶಯ ಇದೀಗ ದಟ್ಟವಾಗಿದೆ.

‘ಬಿಟಿವಿ’ ನೇರಪ್ರಸಾರ ಕಾರ್ಯಕ್ರಮದಲ್ಲಿ ಪ್ರತಾಪ್ ಹಲವು ಪ್ರಶಸ್ತಿ ಪ್ರಮಾಣ ಪತ್ರಗಳು ಹಾಗೂ ಚಿನ್ನದ ಪದಕಗಳನ್ನು ಪ್ರದರ್ಶಿಸಿದ್ದ. ಅಲ್ಲದೇ ತಾನು ತಯಾರಿಸಿದ ಡ್ರೋನ್ ಎಂದು ‘ಡ್ರೋನ್’ ಪಕ್ಕ ನಿಂತಿರುವ ಪೋಟೋ ಒಂದನ್ನು ಮೊಬೈಲ್ ಮೂಲಕ ಪ್ರದರ್ಶಿಸಿದ್ದ. ಇದೇ ಡ್ರೋನ್‌ಗೆ ಜರ್ಮನಿಯಲ್ಲಿ ನನಗೆ ಪ್ರಶಸ್ತಿ ಲಭಿಸಿದ್ದು ಎಂದು ಹೇಳಿದ್ದ.ಇದೀಗ ಪ್ರತಾಪ ಟಿವಿಯಲ್ಲಿ ಪ್ರದರ್ಶಿಸಿದ ಪೋಟೋದಲ್ಲಿರುವ ಡ್ರೋನ್‌ನ ಅಸಲಿ ಮಾಲೀಕರು ಪ್ರತಾಪ್ ವಿರುದ್ಧ ಕಾನೂನಾತ್ಮಕ ಕ್ರಮದ ಬೆದರಿಕೆ ಹಾಕಿದ್ದಾರೆ. ನೀನು ಕಾರ್ಯಕ್ರಮದಲ್ಲಿ ನಮ್ಮ ಕಂಪನಿ ತಯಾರಿಸಿರುವ ಡ್ರೋನ್ ಅನ್ನು ನಿನ್ನದೆಂದು ಹೇಳಿರುವೆ, ಇದಕ್ಕೆ ಸ್ಪಷ್ಟನೆ ನೀಡು, ಇಲ್ಲವಾದಲ್ಲಿ ನಾವು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂಪನಿ ಹೇಳಿದೆ.
ಆ ಡ್ರೋನ್‌ ಅನ್ನು ‘ಬಿಲ್ಜ್ ಐ’ ಕಂಪನಿ ತಯಾರಿಸಿದ್ದು, ಅದರ ಮಾಲೀಕ ‘ಬಿಲ್ ಗಟಬೈರ್’ ಇದೀಗ ಪ್ರತಾಪನ ವಿರುದ್ಧ ತಿರುಗಿಬಿದ್ದಿದ್ದಾರೆ. 2018 ರಲ್ಲಿ ಜರ್ಮನಿಯಲ್ಲಿ ನಡೆದ ‘CeBIT’ ವಸ್ತು ಪ್ರದರ್ಶನದಲ್ಲಿ ‘ಬಿಲ್ಜ್ ಐ’ ಕಂಪನಿ ತಮ್ಮ ಡ್ರೋನ್ ಅನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಅಲ್ಲಿಗೆ ತೆರಳಿದ್ದ ಪ್ರತಾಪ್ ಮತ್ತು ಆತನ ಗೆಳಯರು ‘ಬಿಲ್ಜ್ ಐ’ ಕಂಪನಿಯ ಸ್ಟಾಲ್‌ಗೆ ತೆರಳಿ ಆ ಡ್ರೋನ್‌ನ ಬಗ್ಗೆ ಅದನ್ನು ತಯಾರಿಸಿದ ‘ಬಿಲ್ ಗಟಬೈರ್’ ಬಳಿ ಪ್ರಶ್ನೆಗಳನ್ನು ಕೇಳಿದ್ದಾನೆ. ಅಲ್ಲದೆ ಅವರ ಜೊತೆ ಅನುಮತಿಯನ್ನು ಕೇಳಿ ಡ್ರೋನ್ ಜೊತೆ ನಿಂತು ಪೋಟೋ ತೆಗೆಸಿಕೊಂಡಿದ್ದಾನೆ.ಇದೀಗ ಆ ಪೋಟೋವನ್ನು ‘ಬಿಟಿವಿ’ ಕಾರ್ಯಕ್ರಮದಲ್ಲಿ ತೋರಿಸಿ ಇದು ನಾನು ತಯಾರಿಸಿದ ಡ್ರೋನ್, ಈ ಡ್ರೋನ್‌ಗೆ ಜರ್ಮನಿ ಚಿನ್ನದ ಪದಕ ಕೊಟ್ಟಿದ್ದು ಎಂದು ಓಳು ಬಿಟ್ಟಿದ್ದಾನೆ. ಇದನ್ನೆಲ್ಲ ಗಮನಿಸಿದರೆ ಆತ ತೋರಿಸಿರುವ ಎಲ್ಲಾ ಪ್ರಶಸ್ತಿ ಪತ್ರ ಪದಕಗಳು ನಕಲಿ ಎಂಬುದು ಸಾಬೀತಾಗುತ್ತದೆ. ಇದೀಗ ಒಂದು ಸುಳ್ಳನ್ನು ಮುಚ್ಚಿಹಾಕಲು ಇನ್ನಷ್ಟು ಸುಳ್ಳುಗಳನ್ನು ಹೇಳಿ ಪ್ರತಾಪ ಸಿಕ್ಕಿಹಾಕಿಕೊಂಡಿದ್ದಾನೆ.ಒಂದು ವೇಳಿ ‘ಬಿಲ್ಜ್ ಐ’ ಕಂಪನಿ ಪ್ರತಾಪನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದೇ ಆದಲ್ಲಿ ಇದು ಆತನಿಗೆ ಅಷ್ಟೇ ಅಲ್ಲ ಭಾರತಕ್ಕೂ ವಿಶ್ವದ ಮುಂದೆ ತಲೆತಗ್ಗಿಸುವ ಸಂಗತಿ. ಆದಷ್ಟು ಬೇಗ ‘ಕಾಗೆ ಪ್ರತಾಪ’ ತನ್ನ ತಪ್ಪನ್ನು ಒಪ್ಪಿಕೊಂಡು, ಆ ಕಂಪನಿ ಮಾಲೀಕನಲ್ಲಿ ಕ್ಷಮೆ ಕೇಳಿ ತನ್ನ ಮಾನದ ಜೊತೆ ಭಾರತದ ಮರ್ಯಾದೆಯನ್ನೂ ಉಳಿಸಬೇಕು.

Watch Video

error: Content is protected !!