ಬೇಸಿಗೆ ಕಾಲದಲ್ಲಿ ಪ್ರಾಣಿ ,ಪಕ್ಷಿಗಳು ನೀರು ಸಿಗದೆ ಪರಿತಪಿಸುವ ಸಾಕಷ್ಟು ವೀಡಿಯೋಗಳನ್ನು ನಾವು ನೋಡಿರುತ್ತೇವೆ. ಅದೆಷ್ಟೋ ಪ್ರಾಣಿ, ಪಕ್ಷಿಗಳು ನೀರು, ಆಹಾರ ಸಿಗದೆ ಬೇಸಿಗೆ ಕಾಲದಲ್ಲಿ ಸಾವನ್ನಪ್ಪುತ್ತವೆ.
ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಅಳಿಲು ಒಂದು ನೀರಿನ ದಾಹದಿಂದ ಸ್ಥಳದಲ್ಲಿದ್ದ ವ್ಯಕ್ತಿಯಿಂದ ನೀರು ಕೇಳಿ ಕುಡಿದಿದೆ. ವ್ಯಕ್ತಿಯ ಕೈಯಲ್ಲಿರೋ ಬಾಟಲಿಯಲ್ಲಿ ನೀರು ಇರೋದನ್ನ ಗಮನಿಸಿದ ಅಳಿಲು, ಆತನನ್ನು ಹಿಂಬಾಲಿಸಿ ನೀರಿಗಾಗಿ ಅಂಗಲಾಚುತ್ತಿರೋದನ್ನ ನೀವು ವೀಡಿಯೋದಲ್ಲಿ ಕಾಣಬಹುದು.
ಮೊದಲಿಗೆ ಅಲ್ಲಿದ್ದ ವ್ಯಕ್ತಿಗೆ ಅಳಿಲು ಯಾಕಾಗಿ ತನ್ನನ್ನು ಹಿಂಬಾಲಿಸುತ್ತಿದೆ ಎಂಬುದು ತಿಳಿಯೋದಿಲ್ಲ, ಕೊನೆಗೆ ಅಳಿಲಿಗೆ ದಾಹವಾಗಿದೆ ಎಂದು ತಿಳಿದ ತಕ್ಷಣ ತನ್ನಲ್ಲಿದ್ದ ನೀರಿನ ಬಾಟಲ್ ಮುಚ್ಚಳ ತೆಗೆದು ನೀರುಣಿಸುತ್ತಾನೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,
Watch Video
Squirrel asking for water! The most amazing cutest thing I have ever seen…💕 pic.twitter.com/N49pQAEZra
— Roop Darak BHARTIYA (@iRupND) July 16, 2020