fbpx

ಯೋಗಿ ಕಛೇರಿಯ ಮುಂದೆ ತಾಯಿ, ಮಗಳಿಗೆ ಬೆಂಕಿ ಹಚ್ಚಿಸಿದ್ದು ಕಾಂಗ್ರೆಸ್ ಮತ್ತು ಎಐಎಂಐಎಂ ಗೂಂಡಾಗಳು, ವೀಡಿಯೋ ನೋಡಿ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಛೇರಿ ಎದುರು ತಾಯಿ ಮತ್ತು ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ಹಿಂದೆ ಎಐಎಂಐಎಂ ಮತ್ತು ಕಾಂಗ್ರೆಸ್ ಕೈವಾಡ ಇರೋದು ಇದೀಗ ತನಿಖೆಯಿಂದ ಬಯಲಾಗಿದೆ. ದೇಶಾದ್ಯಂತ ಕೋಲಾಹಲ ಎಬ್ಬಿಸಿದ ಈ ಘಟನೆಯ ನೈಜ ಮುಖವಾಡ ಇದೀಗ ತೆರೆದುಕೊಂಡಿದೆ.

ಆತ್ಮಾಹುತಿಗೆ ಪ್ರಯತ್ನಿಸಿದ ತಾಯಿಯನ್ನು ಸಫಿಯಾ(50) ಮತ್ತು ಮಗಳನ್ನು ಗುಡಿಯಾ(28)ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸಂಬಂಧ ಆಲ್ ಇಂಡಿಯಾ ಮಜ್ಲಿಸ್-ಏ-ಇತ್ತೇಹಾದ್-ಉಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷದ ಅಮೇಠಿ ಜಿಲ್ಲಾಧ್ಯಕ್ಷ ಖಾದಿರ್ ಖಾನ್ ಮತ್ತು ಕಾಂಗ್ರೆಸ್ ನಾಯಕ ಅನೂಪ್ ಪಟೇಲ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಖನೌ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ, ‘ತಾಯಿ-ಮಗಳ ಆತ್ಮಾಹುತಿಗೆ ಕೆಲವರು ಪ್ರಚೋದನೆ ನೀಡಿದ್ದರು. ಲೋಕಭವನದ ಎದುರು ಆತ್ಮಾಹುತಿ ಮಾಡಿಕೊಳ್ಳಿ ಎಂದು ಅವರನ್ನು ಪ್ರಚೋದಿಸಿದ್ದು ಎಐಎಂಐಎಂ ಪಕ್ಷದ ಅಮೇಠಿ ಜಿಲ್ಲಾಧ್ಯಕ್ಷ ಕಾದಿರ್ ಖಾನ್ ಮತ್ತು ಕಾಂಗ್ರೆಸ್ ನಾಯಕ ಅನೂಪ್ ಪಟೇಲ್. ಅವರು ಈ ಪ್ರಕರಣದಲ್ಲಿ ನೇರ ಭಾಗಿಯಾಗಿರುವ ಕಾರಣ ಅವರೂ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

Watch Video

error: Content is protected !!