fbpx

Please assign a menu to the primary menu location under menu

ಲೈವ್‌ಶೋನಲ್ಲಿ ಗೆಳೆಯ ಕೇಳಿದ ಟೆಕ್ನಿಕಲ್ ಪ್ರಶ್ನೆಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾದ ಡ್ರೋನ್ ಪ್ರತಾಪ, ವೀಡಿಯೋ ವೈರಲ್

ಸೋ‌ಕಾಲ್ಡ್ ‘ಯುವ ವಿಜ್ಞಾನಿ’, ಡ್ರೋನ್ ಪ್ರತಾಪನ ಮುಖವಾಡವನ್ನು ಖಾಸಗಿ ಸುದ್ದಿವಾಹಿನಿಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಆತನ ಗೆಳೆಯನೇ ಕಳಚಿ ಹಾಕಿದ್ದಾನಿ. 600ಡ್ರೋನ್ ತಯಾರಿಸಿದ್ದೇನೆ, ಹತ್ತಾರು ಪ್ರಶಸ್ತಿಗಳು ಸಿಕ್ಕಿದೆ ಎಂದು ಓಳುಬಿಟ್ಟು ತಿರುಗಾಡುತ್ತಿದ್ದ ಪ್ರತಾಪನ ಅಸಲಿಯತ್ತು ದೇಶದ ಜನರ ಮುಂದೆ ಬಟಾಬಯಲಾಗಿದೆ.

ಪ್ರತಾಪ ವಿದ್ಯಾಭ್ಯಾಸ ಮಾಡಿದ ಕಾಲೇಜಿನಲ್ಲೇ ಕಲಿತು ಜಪಾನ್‌ನ ಪ್ರತಿಷ್ಟಿತ ಕಂಪನಿಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ದರ್ಶನ್ ಎಂಬವರು ನಿನ್ನೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ನೇರಪ್ರಸಾರ ಕಾರ್ಯಕ್ರಮಕ್ಕೆ ಕರೆಮಾಡಿದ್ದರು. ಈ ಸಂದರ್ಭದಲ್ಲಿ ಅವರು ಡ್ರೋನ್ ತಯಾರಿಸಲು ಗೊತ್ತಿರಬೇಕಾದ ‘ಏರೋಡೈನಾಮಿಕ್ಸ್’ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ದರ್ಶನ್ ಅವರು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ತಬ್ಬಿಬ್ಬಾದ ಕಾಗೆ ಪ್ರತಾಪ, ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾಗಿದ್ದಾನೆ. ದರ್ಶನ್ ಕೇಳಿದ್ದು ಅತೀ ಸುಲಭ ತಾಂತ್ರಿಕ ಪ್ರಶ್ನೆಗಳು, ಅದಕ್ಕೇ ಕಾಗೆ ಪ್ರತಾಪನ ಬಳಿ ಉತ್ತರವಿಲ್ಲ, ಇನ್ನು ತಾಂತ್ರಿಕತೆಯ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲದ ಈತ 600 ಡ್ರೋನ್ ಹಾರಿಸಿದ್ದಾನೆ ಎಂದರೆ ಜನ ನಂಬಲು ಸಿದ್ದರಿದ್ದಾರೆಯೇ?

ಈತ ತಯಾರಿಸಿದ ಡ್ರೋನ್ ಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದ್ರು ಆತನ ಬಳಿ ಉತ್ತರವಿಲ್ಲ. ಯಾವುದೇ ವಿಷಯಕ್ಕೆ ಸಂಬಂಧಿಸದ ಪುರಾವೆ ಕೇಳಿದ್ರೆ ಆತನ ಕೊಡೋ ಉತ್ತರ ‘ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು. ಈತ ಕಂಡುಹಿಡಿದಿರೋದು ಡ್ರೋನೋ ಅಥವಾ ಅಣುಬಾಂಬೋ ದೇವನೇ ಬಲ್ಲ.

ಸಹಪಾಠಿ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಡ್ರೋನ್ ಪ್ರತಾಪ, ಇಲ್ಲಿದೆ ನೋಡಿ ವೀಡಿಯೋ

Watch Video

error: Content is protected !!