fbpx

ಲಾಕ್‌ಡೌನ್ ನಡುವೆ ನಮಾಜ್‌ಗೆ ಅವಕಾಶ ಕೇಳಿದ ಮೌಲ್ವಿಗಳಿಗೆ ಹಿಗ್ಗಾಮುಗ್ಗ ಜಾಡಿಸಿದ ಬಿಜೆಪಿ ಶಾಸಕ

ಕರ್ನಾಟಕದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ‌. ರಾಜ್ಯದ ಹಲವು ಜಿಲ್ಲೆಗಳು ಇದೀಗ ಒಂದು ವಾರಗಳ ಲಾಕ್‌ಡೌನ್ ಘೋಷಿಸಿಕೊಂಡಿದ್ದು, ಕೇವಲ ತುರ್ತು ಅಗತ್ಯ ಕೆಲಸಗಳಿಗೆ ಮಾತ್ರ ಓಡಾಟಕ್ಕೆ ಅನುಮತಿ ನೀಡಲಾಗಿದೆ.

ಇದೇ ಸಂಬಂಧ ಬೆಳಗಾವಿಯ ಹುಕ್ಕೇರಿ ತಾಲೂಕನ್ನು ಲಾಕ್‌ಡೌನ್ ಮಾಡುವ ಸಲುವಾಗಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿಯವರು ಇಂದು ತುರ್ತು ಸಭೆ ಕರೆದಿದ್ದರು. ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಒಂದು ವಾರ ಹುಕ್ಕೇರಿ ತಾಲೂಕು ಲಾಕ್‍ಡೌನ್ ಮಾಡಲು ತೀರ್ಮಾನ ಮಾಡಲಾಯಿತು.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಎಲ್ಲಾ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರು ಶಾಸಕರ ಮಾತಿಗೆ ಸಮ್ಮತಿ ಸೂಚಿಸಿದರೆ ಕೆಲ ಮುಸ್ಲಿಂ ಮುಖಂಡರು ನಮಾಜ್ ಮಾಡಲು ಅವಕಾಶ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಇದರಿಂದ ಗರಂದ ಆದ ಶಾಸಕರು ಮುಸ್ಲಿಂ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.

‘ಕೊರೊನಾ ಮಹಾಮಾರಿ ಮಧ್ಯೆ ಮಸೀದಿ ಆರಂಭ ಮಾಡಿ ಸಾಯಬೇಕಾ?, ಮಸೀದಿಗೆ ಹೋಗಿ ಅಲ್ಲಾ-ಅಲ್ಲಾ ಎಂದು ಪ್ರಾರ್ಥನೆ ಮಾಡಿದರೆ ನೀವೇನೂ ಉಳಿಯುವುದಿಲ್ಲ, ಎಲ್ಲರೂ ಒಂದು ದಿನ ಸಾಯೋದೇ, ನಾನು ಸಾಯಬೇಕು ನೀನು ಸಾಯಬೇಕು, ಅಲ್ಲಾ-ಅಲ್ಲಾ ಅನ್ನೋದನ್ನು ನಾಲ್ಕು ದಿನ ನಿಲ್ಲಿಸಿ ಲಾಕ್‍ಡೌನ್‍ಗೆ ಸಹಕಾರ ನೀಡಿ’ ಎಂದಿದ್ದಾರೆ.

ಜುಲೈ 20ರಿಂದ ಜುಲೈ 27ರ ಸೋಮವಾರದವರೆಗೆ ಒಂದು ವಾರಗಳ ಕಾಲ ಹುಕ್ಕೇರಿ ತಾಲೂಕು ಸಂಪೂರ್ಣ ಲಾಕ್‍ಡೌನ್ ಮಾಡುವಂತೆ ಅಧಿಕಾರಿಗಳಿಗೆ ಕತ್ತಿ ಸೂಚನೆ ನೀಡಿದರು. ಹೀಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕನ್ನು ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

error: Content is protected !!